ಬೆಂಗಳೂರು - ಉದ್ಯಾನನಗರಿ ಬೆಂಗಳೂರಿನ ಗವಿ ಗಂಗಾಧರೇಶ್ವರ ದೇವಾಲಯ ನಿಜಕ್ಕೂ ವಿಸ್ಜಯಕ್ಕೆ ಹಿಡಿದ ಕೈ ಗನ್ನಡಿಯಾಗಿದೆ. ಮಹಾಋಷಿಗಳಾದ ಗೌತಮ , ಭಾರಧ್ಜಜರ ತಪೋಭೂಮಿಯೇ ಈ ಗವಿಗಂಗಾಧರೇಶ್ವರ ಸನ್ನಿದಿಯಾಗಿದೆ.
ಈ ದೇಗುಲದಲ್ಲಿ ಬೆಂಗಳೂರಿನಿಂದ ಕಾಶೀಗೆ ನೇರ ಸಂಪರ್ಕ ಇರುವ ಸುರಂಗ ಮಾರ್ಗವಿದೆ. ಪ್ರಳಯ ಕಾಲಕ್ಕೆ ದೇವಾಲಯದ ಆವರಣದಲ್ಲಿರುವ ಡಮರುಗ , ತ್ರಿಶೂಲ ಹಾಗೂ ಕಲ್ಲಿನ ಚಕ್ರ ಶಿಲೆಯೂ ಎದ್ದು ನೃತ್ಯ ಮಾಡುತ್ತವೆ ಎಂಬ ನಂಬಿಕೆಯೂ ಇದೆ.
ಅಷ್ಟೇ ಅಲ್ಲದೇ ಈ ದೇವಾಲಯದಲ್ಲಿ ವರ್ಷಕ್ಕೊಮ್ಮೆ ಮಾತ್ರ ಸೂರ್ಯನ ಕಿರಣಗಳು ಶಿವಲಿಂಗ ಸ್ಮರ್ಶಿಸಿ ದಕ್ಷಿಣಾಯಾನದಿಂದ ಉತ್ತರಾಯಣಕ್ಕೆ ತನ್ನ ಪಥ ಬದಲಾಯಿಸಲು ಅನುಮತಿ ಕೋರುತ್ತಾನೆ ಎಂಬ ನಂಬಿಕೆ ನಡೆಯುತ್ತಾ ಬಂದಿದೆ.
ನೂರಾರು ವರ್ಷಗಳ ಇತಿಹಾಸ ಪ್ರಸಿದ್ಧ ದೇವಾಲಯದಲ್ಲಿ ಮಕರ ಸಂಕ್ರಾಂತಿ , ಪೂರ್ಣಿಮಿ , ಹುಣ್ಣಿಮೆ ವಿಶೇಷ ಸಂದರ್ಭಗಳಲ್ಲಿ ಭಕ್ತ ಸಮೂಹವೇ ನೆರದಿರುತ್ತದೆ.