ದೇಶ

ಐಐಟಿ ಇಂಜಿನಿಯರ್‌.. ಕಾರ್ಪೋರೇಟ್‌ ಕೆಲಸ.. ಇದೀಗ ಬಾಬಾ; ಅಭಯ್‌ ಸಿಂಗ್‌ ಆಧ್ಯಾತ್ಮದ ಹಾದಿ

ಹರಿಯಾಣ ಮೂಲದ ಅಭಯ್ ಸಿಂಗ್, ಆಧ್ಯಾತ್ಮಿಕ ಜೀವನಕ್ಕಾಗಿ ತಮ್ಮ ಯೌವ್ವನದಲ್ಲಿಯೇ ಲೌಕಿಕ ಬದುಕು ತೊರೆದಿದ್ದಾರೆ.. ಕುಂಭದಲ್ಲಿ ಪಾಲ್ಗೊಂಡ ಬಳಿಕ ‘ಇಂಜಿನಿಯರ್ ಬಾಬಾ’ ಎಂದು ಕರೆಯಲ್ಪಡುತ್ತಿರುವ ಸಿಂಗ್,, ಆಧ್ಯಾತ್ಮಿಕ ಲೋಕದಲ್ಲಿ ವಿಶಿಷ್ಟವಾಗಿ ಎದ್ದು ಕಾಣ್ತಾರೆ.

ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ ಬರೋಬ್ಬರಿ 144 ವರ್ಷಗಳ ನಂತರ ಮಹಾಕುಂಭಮೇಳ ನಡೆಯುತ್ತಿದೆ. ಜೀವಮಾನದಲ್ಲಿ ಒಮ್ಮೆ ಮಾತ್ರ ನೋಡಬಹುದಾದ ಅದ್ಭುತ ಹಾಗೂ ಮನೋಹರ ದೃಶ್ಯವಿದು. ತ್ರಿವೇಣಿ ಸಂಗಮದಲ್ಲಿ ನಡೆಯುತ್ತಿರುವ ಮಹಾಕುಂಭಮೇಳ ಈ ಬಾರಿ ಹತ್ತು-ಹಲವು ವಿಶಿಷ್ಠಗಳಿಂದ ಸೆಳೆಯುತ್ತಿದೆ. ಅದರಲ್ಲಿಯೂ ನಾಗಸಾಧು, ಅಘೋರಿಗಳ ಕುರಿತಾದ ಚಿತ್ರ-ವಿಚಿತ್ರ ಕಥೆಗಳು ಟ್ರೆಂಡಿಂಗ್‌ನಲ್ಲಿವೆ.

ಪ್ರಯಾಗ್ ರಾಜ್‌ನಲ್ಲಿ ನಡೆಯುತ್ತಿರುವ ಐತಿಹಾಸಿಕ  ಮಹಾಕುಂಭಮೇಳವೂ ಹಲವು ವಿಚಾರಕ್ಕಾಗಿ ವಿಶ್ವದ ಗಮನಸೆಳೆತ್ತಿದೆ. ಲಕ್ಷಾಂತರ ಮಂದಿ ಸಾಧು, ಸಂತರು ಭಿನ್ನ , ವಿಭಿನ್ನ ವೇಷಭೂಷಣಗಳೊಂದಿಗೆ ಭಾಗಿಯಾಗುತ್ತಿದ್ದಾರೆ. ಎಲ್ಲರ ಪೈಕಿ ಐಐಟಿ ಬಾಂಬೆಯಲ್ಲಿ ಏರೋಸ್ಪೇಸ್ ಇಂಜಿನಿಯರಿಂಗ್ ಪದವಿ ಪಡೆದ ಸಾಧಕರೊಬ್ಬರು ಈಗ ಬಾಬಾ ಆಗಿ ಬದಲಾಗಿ ಹೆಚ್ಚು ಸುದ್ದಿಯಾಗುತ್ತಿದ್ದಾರೆ.

ಹರಿಯಾಣ ಮೂಲದ ಅಭಯ್ ಸಿಂಗ್, ಆಧ್ಯಾತ್ಮಿಕ ಜೀವನಕ್ಕಾಗಿ ತಮ್ಮ ಯೌವ್ವನದಲ್ಲಿಯೇ ಲೌಕಿಕ ಬದುಕು ತೊರೆದಿದ್ದಾರೆ. ಕುಂಭದಲ್ಲಿ ಪಾಲ್ಗೊಂಡ ಬಳಿಕ ‘ಇಂಜಿನಿಯರ್ ಬಾಬಾ’ ಎಂದು ಕರೆಯಲ್ಪಡುತ್ತಿರುವ ಸಿಂಗ್,  ಆಧ್ಯಾತ್ಮಿಕ ಲೋಕದಲ್ಲಿ ವಿಶಿಷ್ಟವಾಗಿ ಎದ್ದು ಕಾಣ್ತಾರೆ.

ಆಧ್ಯಾತ್ಮ ಲೋಕದಲ್ಲಿ ಪಯಣಿಸುತ್ತಿರುವ ಅಭಯ್ ಸಿಂಗ್, ಬಾಂಬೆಯ ಐಐಟಿಯಲ್ಲಿ ಏರೋಸ್ಪೇಸ್ ಎಂಜಿನಿಯರ್ ಪದವಿ ಪಡೆದಿದ್ದು, ಇದೀಗ ಕುಂಭಮೇಳದಲ್ಲಿ ಸಾಧು ಆಗಿ ಕಾಣಿಸಿಕೊಂಡಿದ್ದಾರೆ. ಕ್ಯಾಂಪಸ್ ಪ್ಲೇಸ್‌ಮೆಂಟ್ ಮೂಲಕವೇ ಕಾರ್ಫೊರೇಟ್‌ ಜಗತ್ತಲ್ಲಿ, ದೊಡ್ಡ ಮೊತ್ತದ ಸಂಬಳಕ್ಕೆ ಉತ್ತಮ ಕೆಲಸವನ್ನೇ ಪಡೆದಿದ್ರು. ಅಷ್ಟೇ ಅಲ್ಲ.. ನಾನು ಪ್ರಾಧ್ಯಾಪಕನಾಗಿಯೂ ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದೇನೆ. ಕೋಚಿಂಗ್ ಸೆಂಟರ್ ಮೂಲಕ ವಿದ್ಯಾರ್ಥಿಗಳಿಗೆ ಭೌತಶಾಸ್ತ್ರ ಪಾಠ ಮಾಡಿದ್ದೇನೆ ಅಂತಾ ಐಐಟಿ ಬಾಬಾ ಹೇಳಿಕೊಂಡಿದ್ದಾರೆ.

ಟ್ರಾವೆಲ್ ಫೋಟೋಗ್ರಫಿ ಆಸಕ್ತಿಯೇ ನಾನು  ಇಂಜಿನಿಯರಿಂಗ್ ವೃತ್ತಿ ತೊರೆಯಲು ಕಾರಣವಾಯಿತು. ಇದು ನನ್ನ ಜೀವನದ ಮಹತ್ವದ ತಿರುವು.. ಈ ಸಮಯದಲ್ಲಿಯೇ ಜೀವನದ ಬಗ್ಗೆ ನನ್ನ ಗುರಿ ಬದಲಾಗಲಾರಂಭಿಸಿತು.. ಕ್ರಮೇಣ, ಆಸಕ್ತಿಗಳು ಆಧ್ಯಾತ್ಮಿಕತೆಯ ಕಡೆಗೆ ಹೊರಳಿದ್ದು, ಆಳವಾದ ಆಧ್ಯಾತ್ಮಿಕ ಸತ್ಯಗಳನ್ನು ಅರ್ಥಮಾಡಿಕೊಳ್ಳಲು, ಅನುಭವಿಸಲು ತನ್ನ ಜೀವನವನ್ನು ಮುಡಿಪಾಗಿಟ್ಟೆ ಎಂದಿದ್ದಾರೆ.

ಹೀಗೆ ತಮ್ಮ ವ್ಯಕ್ತಿತ್ವದಿಂದಲೇ ಎಲ್ಲರ ಗಮನ  ಸೆಳೆಯುತ್ತಿರುವ ಐಐಟಿ ಬಾಬಾ ಅಲಿಯಾಸ್‌ ಅಭಯ್‌ ಸಿಂಗ್‌, ನೆನೆದು ಪೋಷಕರು ಕಣ್ಣೀರಾಕಿದ್ದಾರೆ..ಮನೆಗೆ ವಾಪಸ್ ಬಂದು ಬಿಡು ಅಂತಾ ಗೋರೆದಿದ್ದಾರೆ. ಆದರೆ ಇದಕ್ಕೆ ಐಐಟಿ ಬಾಬಾ ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಫೋಟೋಗ್ರಫಿ ಹಿಂದೆ ಹೋದಾಗ ಕುಟುಂಬ ನನ್ನನ್ನು ಅಪಹಾಸ್ಯ ಮಾಡಿತ್ತು. ಕೌಟುಂಬಿಕ ವಾತಾವರಣ ಖಿನ್ನತೆ ಮತ್ತು ನಿದ್ದೆಯಿಲ್ಲದ ರಾತ್ರಿಗಳಿಗೆಕಾರಣವಾಗಿತ್ತು. ಯೋಗ ಮತ್ತು ವೇದಸೂತ್ರಗಳು ಮೋಕ್ಷಕ್ಕೆ ದಾರಿ ಎಂದು ಆಧ್ಯಾತ್ಮದ ಹಾದಿ ತುಳಿದಿದ್ದೇನೆ. ಇನ್ನು ಮುಂದೆ ಮನೆಗೆ ಬರಲ್ಲ ಅಂತ ಐಐಟಿ ಬಾಬಾ ಸ್ಪಷ್ಟಪಡಿಸಿದ್ದಾರೆ.