ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ಹಿರಿಯ ನಟ ಅನಂತ್‌ನಾಗ್ ಅವರಿಗೆ ಕೇಂದ್ರ ಸರ್ಕಾರ ಪದ್ಮಭೂಷಣ ಪ್ರಶಸ್ತಿ ಘೋಷಿಸಿದೆ. ಈ ಮೂಲಕ ಕನ್ನಡ ಸಿನಿ ಪ್ರೇಮಿಗಳ ಹಲವು ವರ್ಷಗಳ ಬೇಡಿಕ ಫಲಿಸಿದೆ. ಅನಂತ್‌ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಘೋಷಣೆಯಾಗುತ್ತಿದ್ಧಂತೆ ಚಿತ್ರರಂಗ ಅನೇಕರು ಅನಂತ್‌ನಾಗ್ ಅವರಿಗೆ ಶುಭಕೋರಿದ್ದಾರೆ.
ನಟ, ನಿರ್ಧೇಶಕ ರಿಷಬ್ ಶೆಟ್ಟಿ ಕೂಡ ಟ್ವೀಟ್ ಮಾಡುವ ಮೂಲಕ ಅನಂತ್‌ನಾಗ್ ಅವರಿಗೆ ಶುಭಕೋರಿದ್ದಾರೆ. ‘ನನ್ನ ಸ್ಪೂರ್ತಿಯಾಗಿರುವ ಅನಂತ್ ನಾಗ್ ಅವರಿಗೆ ಪದ್ಮ ಭೂಷಣ ಪ್ರಶಸ್ತಿ ದೊರೆತಿದ್ದಕ್ಕೆ ಅಭಿನಂದನೆಗಳು. ಚಿತ್ರರಂಗಕ್ಕೆ ಹಾಗೂ ನಾಟಕ ರಂಗಕ್ಕೆ ನಿಮ್ಮ ಸೇವೆ ತಲೆಮಾರುಗಳಿಗೆ ಸ್ಪೂರ್ತಿ ತುಂಬಿದೆ. ಸರಳತೆಯಲ್ಲಿ ಸಾಧಕತೆ ಅಡಗಿದೆ ಎಂದು ತೋರಿಸಿದ್ದಕ್ಕೆ ಧನ್ಯವಾದಗಳು. ಕನ್ನಡ ಚಿತ್ರರಂಗದ ರತ್ನ, ನಮ್ಮೆಲ್ಲರ ಪ್ರಿಯ ಅನಂತ್ ನಾಗ್ ಅವರಿಗೆ ಪದ್ಮಭೂಷಣ ಪ್ರಶಸ್ತಿ ಲಭಿಸಿದ ಸುದ್ದಿ ಕೇಳಿ ಅಪಾರ ಸಂತೋಷವಾಯಿತು. ನಿಮ್ಮ ಕಲಾ ಸಾಧನೆ ಕನ್ನಡ ನಾಡಿನ ಕೀರ್ತಿಯನ್ನು ಹೆಚ್ಚಿಸಿದೆ. ನಿಮ್ಮ ಈ ಸಾಧನೆಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು’ ಅರೊಂದಿಗಿನ ಫೋಟೋವನ್ನ ಹಂಚಿಕೊಂಡು ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದಾರೆ.