ಬೆಂಗಳೂರಿನ ಇಂದಿರಾನಗರದ ಅಪಾರ್ಟ್ಮೆಂಟ್ನಲ್ಲಿ ಪ್ರೀತಿಸಿದ ಹುಡುಗಿ ಮಾಯಾ ಗೊಗಾಯ್ ಗೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಆರವ್ ಹನೋಯ್ ಎಸ್ಕೇಪ್ ಆಗಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡು ಹೋಗಿದ್ದ ಮಾಯಾಳ ಪ್ರೇಮಿ ಆರವ್ನನ್ನು ಉತ್ತರ ಭಾರತದಲ್ಲಿ ಪತ್ತೆ ಹಚ್ಚಿದ ಇಂದಿರಾನಗರ ಪೊಲೀಸರು ಸದ್ಯ ಆರೋಪಿಯನ್ನು ವಶಕ್ಕೆ ಪಡೆದಿದ್ದಾರೆ. ಸದ್ಯ ಉತ್ತರ ಭಾರತದಲ್ಲಿ ಆರವ್ನನ್ನು ವಶಕ್ಕೆ ಪಡೆದಿರುವ ಪೊಲೀಸರು ಬೆಂಗಳೂರಿಗೆ ಕರೆತರುತ್ತಿದ್ದಾರೆ.