ಹಾವೇರಿ : ಅಳಿಯನೊಬ್ಬ ತನ್ನ ಪತ್ನಿಯನ್ನು ತವರು ಮನೆಯವರು ಕಳುಹಿಸಿಲ್ಲವೆಂದು ಕೋಪಗೊಂಡು ಮಾವನ ಜಮೀನಿನಲ್ಲಿ ಬೆಳೆದಿದ್ದ ಸುಮಾರು 106 ಕ್ಕೂ ಹೆಚ್ಚಿನ ಅಡಿಕೆ ಗಿಡಗಳನ್ನು ಕಡಿದು ನಾಶಮಾಡಿದ ಘಟನೆಯೊಂದು ಹಾವೇರಿ ಜಿಲ್ಲೆಯ ಹಾನಗಲ್ ತಾಲ್ಲೂಕಿನ ಬಸಾಪುರ ಗ್ರಾಮದಲ್ಲಿ ನಡೆದಿದೆ. ಈ ಘಟನೆ ಸಂಬಂಧ ಆಡೂರು ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಹೌದು, ದೇವೇಂದ್ರಪ್ಪ ಫಕ್ಕೀರಪ್ಪ ಗಾಣಿಗೇರ ಎಂಬುವರು ಅಳಿಯ ಬಸವರಾಜ ವಿರುದ್ದ ದೂರು ನೀಡಿದ್ದಾರೆ.
ಆರೋಪಿ ಬಸವರಾಜ ದಿನ ಕುಡಿದುಬಂದು ಪತ್ನಿ ಜೊತೆ ಜಗಳ ಮಾಡುತ್ತಿದ್ದ, ತವರು ಮನೆಯವರು ಎಷ್ಟೇ ಹೇಳಿದರೂ ಆರೋಪಿ ಸುಧಾರಿಸಿರಲಿಲ್ಲ. ಇದರಿಂದ ಬೇಸತ್ತ ಪತ್ನಿ ತವರು ಮನೆಯಲ್ಲಿ ಉಳಿದುಕೊಂಡಿದ್ದಳು. ಹೀಗಾಗಿ, ಮಗಳನ್ನು ಕಳುಹಿಸುವುದಿಲ್ಲವೆಂದು ದೇವೇಂದ್ರಪ್ಪ ಅವರು ಹೇಳಿದ್ದರು. ಇದರಿಂದ ಕೋಪಗೊಂಡ ಅಳಿಯ 2 ವರ್ಷದ ಅಡಿಕೆ ಗಿಡಗಳನ್ನು ನಾಶ ಮಾಡಿದ್ದಾನೆ.