ಕರ್ನಾಟಕ

ಸಿಎಂ ಸಿದ್ದರಾಮಯ್ಯಗೆ ಸುತ್ತಿಕೊಳ್ತು ಮತ್ತೊಂದು ಭೂ ಹಗರಣ ಆರೋಪ..

ಭೂ ಹಗರಣದ ಆರೋಪದ ತನಿಖೆಗೆ ಸ್ನೇಹಮಯಿ ಕೃಷ್ಣ ಮನವಿ..

ಸ್ನೇಹಿತರೇ ಸಿಎಂ ಸಿದ್ದರಾಮಯ್ಯನವರಿಗೆ ಬಿಟ್ಟು ಬಿಡದೆ ಕಂಟಕಗಳು ಎದುರಾಗುತ್ತಲೇ ಇದೆ, ಮೊದಲು ಕುಟುಂಬದ ವಿರುದ್ಧ ಮುಡಾ ಅಕ್ರಮ ನಿವೇಶನ ಮಾರಾಟದ ಆರೋಪದ ನಂತರ ಸ್ವಲ್ಪ ರಿಲೀಫ್‌ಸಿಕ್ಕಿತ್ತು ತದನಂತ ಇದೀಗ ಮತ್ತೊಂದು ಆರೋಪ ಕೇಳಿಬಂದಿದೆ, ಹೌದು ಆರ್‌ಟಿಐ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ದಟ್ಟಗಳ್ಳಿ ಬಡಾವಣೆಯಲ್ಲಿ ಅಕ್ರಮ ನಿವೇಶನ ಪಡೆದು ಬೇರೆಯವರಿಗೆ ಮಾರಾಟ ಮಾಡಿದ್ದಾರೆಂದು ಆರೋಪಿಸಿದ್ದಾರೆ, ತನಿಖೆ ಮಾಡಿ ಎಂದು ಲೋಕಾಯುಕ್ತಕ್ಕೆ ಮತ್ತಷ್ಟು ದಾಖಲೆಯೊಂದಿಗೆ ಈಗ ಮನವಿ ಮಾಡಿದ್ದಾರೆ..
ಮನವಿ ಸಲ್ಲಿಕೆ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಸ್ನೇಹಮಯಿ ಕೃಷ್ಣ, ಮುಡಾ 50:50 ಹಗರಣ ವಿಚಾರವಾಗಿ ಲೋಕಾಯಕ್ತದಲ್ಲಿ ನಾನು ಪ್ರಕರಣ ದಾಖಲಿಸಿದ್ದೆ ಎಲ್ಲಾ 50:50 ಅನುಪಾತದ ಸೈಟುಗಳ ಬಗ್ಗೆ ತನಿಖೆ ಮಾಡುವಂತೆ ಮನವಿ ಪತ್ರ ಕೊಟ್ಟಿದೆ, ಆದರೆ ಲೋಕಾಯುಕ್ತ ಕೇವಲ ಸಿದ್ದರಾಮಯ್ಯ ಕುಟುಂಬದ 14 ಸೈಟುಗಳ ಬಗ್ಗೆ ಮಾತ್ರ ತನಿಖೆ ಮಾಡಿದ್ದಾರೆ, ಇತರ ಆರೋಪಿಗಳು ತಪ್ಪಿಸಿಕೊಳ್ಳಲು ಅನುವು ಮಾಡಿಕೊಟ್ಟಿದ್ದಾರೆ, ದಟ್ಟಗಳ್ಳಿ ಗ್ರಾಮದಲ್ಲಿ ಸಿಎಂ ಪತ್ನಿ ಪಾರ್ವತಿ 24 ಲಕ್ಷಕ್ಕೆ ಒಂದು ಸೈಟು ಖರೀದಿ ಮಾಡಿದ್ದಾರೆ, 2008 ಖರೀದಿ ಮಾಡಿ, 2014ರಲ್ಲಿ ಆ ಸೈಟ್‌ನ ಮಾರಾಟ ಮಾಡಿದ್ದಾರೆ, 6 ವರ್ಷಗಳಲ್ಲಿ 75 ಲಕ್ಷ ಲಾಭ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡ್ತಿದ್ದಾರೆ