ದೇಶ

ಇಸ್ರೋದಿಂದ ಮತ್ತೊಂದು ಮೈಲುಗಲ್ಲು; ನಭಕ್ಕೆ ಚಿಮ್ಮಿದ 100ನೇ ಉಪಗ್ರಹ

1979ರ ಆಗಸ್ಟ್‌ 10ರಂದು ಇಸ್ರೋ ಶ್ರೀಹರಿಕೋಟಾದಿಂದ ಮೊದಲ ರಾಕೆಟ್‌ ಅನ್ನು ಭಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು. ಈಗ ಸುಮಾರು 46 ವರ್ಷಗಳ ಬಳಿಕ ಇಸ್ರೋ 100ನೇ ರಾಕೆಟ್‌ ಹಾರಿಸಿದೆ.

ಶ್ರೀಹರಿಕೋಟ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ ಆಂಧ್ರಪ್ರದೇಶದ ಶ್ರೀಹರಿಕೋಟಾದಿಂದ ತನ್ನ ಯಶಸ್ವಿಯಾಗಿ 100ನೇ ಉಡ್ಡವಣೆಯನ್ನುಉಡಾವಣೆ ಮಾಡಿದೆ.   GSLV-F15 ರಾಕೆಟ್ ಮೂಲಕ NVS-02 ಉಪಗ್ರಹ ಬೆಳಿಗ್ಗೆ 6:23ಕ್ಕೆ ಯಶಸ್ವಿಯಾಗಿ ನಭಕ್ಕೆ ಚಿಮ್ಮಿದೆ. ಇಸ್ರೋ ನೂತನ ಅಧ್ಯಕ್ಷ ವಿ.ನಾರಾಯಣನ್ ನೇತೃತ್ವದಲ್ಲಿ 100ನೇ ಉಪಗ್ರಹವನ್ನ ಯಶಸ್ಸಿಯಾಗಿ ಲಾಂಚ್‌ ಮಾಡಲಾಗಿದೆ. ಇದು ದೇಶದ ನಾವಿಕ್‌ ನ್ಯಾವಿಗೇಷನ್‌ ವ್ಯವಸ್ಥೆಗೆ ಅತ್ಯಂತ ಮಹತ್ವದ್ದಾಗಿದೆ. ಸ್ವದೇಶಿ ಕ್ರಯೋಜೆನಿಕ್‌ ಎಂಜಿನ್‌ ಬಳಸಿಕೊಂಡಿರುವ ರಾಕೆಟ್‌ಗಳ ಪೈಕಿ 11ನೇ ಉಡಾವಣೆ ಇದಾಗಿದೆ.

1979ರ ಆಗಸ್ಟ್‌ 10ರಂದು ಇಸ್ರೋ ಶ್ರೀಹರಿಕೋಟಾದಿಂದ ಮೊದಲ ರಾಕೆಟ್‌ ಅನ್ನು ಭಾಹ್ಯಾಕಾಶಕ್ಕೆ ಉಡಾವಣೆ ಮಾಡಿತ್ತು. ಈಗ ಸುಮಾರು 46 ವರ್ಷಗಳ ಬಳಿಕ ಇಸ್ರೋ 100ನೇ ರಾಕೆಟ್‌ ಹಾರಿಸಿದೆ.

NVS-02 ಉಪಗ್ರಹದಿಂದ ಏನು ಪ್ರಯೋಜನ?
ಇದು ಭಾರತ ಗಡಿಯಾಚೆಗೆ 1,500 ಕಿಲೋಮೀಟರ್ ತನಕ ದೂರದಲ್ಲಿರುವ ಬಳಕೆದಾರರಿಗೆ ಹವಾಮಾನ ಮುನ್ಸೂಚನೆ, ವಿಕೋಪ ನಿಯಂತ್ರಣ, ರಕ್ಷಣೆ , ಅಪರಿಚಿತ ಸ್ಥಳದ ವಿಳಾಸವನ್ನು ಪತ್ತೆ ಮಾಡುತ್ತದೆ. ಎರಡು ರೀತಿಯ ಸೇವೆಯನ್ನು ಈ ಉಪಗ್ರಹ ನೀಡಲಿದ್ದು, ಸ್ಟ್ಯಾಂಡರ್ಡ್ ಪೊಸಿಷನಿಂಗ್ ಸೇವೆಯ ಮೂಲಕ ಸಾರ್ವಜನಿಕ ಬಳಕೆಗೆ ಸಹಕಾರ ನೀಡಲಿದ್ದರೆ, ರಿಸ್ಟ್ರಿಕ್ಟಡ್ ಸರ್ವಿಸ್ ಮೂಲಕ ಭಾರತೀಯ ಸೇನೆ, ಮತ್ತು ಭಾರತ ಸರ್ಕಾರದ ಕೆಲ ಸಂಸ್ಥೆಗಳಿಗೆ ಸೇವೆ ನೀಡುತ್ತದೆ.