ವಿದೇಶ

140 ಪ್ರಯಾಣಿಕರನ್ನ ಹೊತ್ತು ಸಾಗಲು ಸಿದ್ಧವಾಗಿದ್ದ ವಿಮಾನಕ್ಕೆ ಮತ್ತೊಂದು ವಿಮಾನ ಡಿಕ್ಕಿ..!

ವಿಮಾನಗಳು ಡಿಕ್ಕಿಹೊಡೆದ ಪರಿಣಾಮ ನಿಲ್ದಾಣದಲ್ಲಿ ಅರೆಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪ್ರಯಾಣ ತಡವಾಗಿದ್ದಕ್ಕೆ ಎಲ್ಲ ಪ್ರಯಾಣಿಕರ ಬಳಿ ಡೆಲ್ಟಾ ವಿಮಾನದ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಸೀಟಾಕ್ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

ಜಪಾನ್ನ ಸೀಟಾಕ್ ವಿಮಾನ ನಿಲ್ದಾಣದಲ್ಲಿ ನಿಂತಿದ್ದ ಡೆಲ್ಟಾ ವಿಮಾನದ-1921 ಬಾಲಕ್ಕೆ, ಜಪಾನ್ ಏರ್ಲೈನ್ಸ್ ವಿಮಾನದ ಒಂದು ಭಾಗದ ರೆಕ್ಕೆಯು ಡಿಕ್ಕಿಯಾಗಿದೆ. ಅದೃಷ್ಟವಶಾತ್‌ ಯಾವುದೇ ಪ್ರಣಾಪಾಯ ಸಂಭವಿಸಿಲ್ಲ. ಡೆಲ್ಟಾ ವಿಮಾನವು 142 ಪ್ರಯಾಣಿಕರೊಂದಿಗೆ ಜಪಾನ್ನ ಸೀಟಾಕ್ ವಿಮಾನ ನಿಲ್ದಾಣದಿಂದ ಮೆಕ್ಸಿಕೋದ ಪೋರ್ಟೊ ವಲ್ಲರ್ಟಾಗೆ ಪ್ರಯಾಣಿಸಲು ಸಿದ್ಧವಾಗುತ್ತಿತ್ತು. ಇದೇ ವೇಳೆಯೇ ಜಪಾನ್ ಏರ್ಲೈನ್ಸ್ ವಿಮಾನ ಡಿಕ್ಕಿಯಾಗಿದ್ದು, ಒಂದು ಕ್ಷಣ ಪ್ರಯಾಣಿಕರು ಆತಂಕಕ್ಕೊಳಗಾಗಿದ್ದರು. ಆದರೆ ವಿಮಾನ ಡಿಕ್ಕಿಯಿಂದ ಯಾವುದೇ ಪ್ರಯಾಣಿಕರಿಗೂ ಗಾಯಗಳಿಲ್ಲಾ 142 ಪ್ರಯಾಣಿಕರೂ ಕೂಡ ಸುರಕ್ಷಿತವಾಗಿದ್ದಾರೆ ಎಂದು ಸೀಟಾಕ್ ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಇನ್ನೂ ವಿಮಾನಗಳು ಡಿಕ್ಕಿಹೊಡೆದ ಪರಿಣಾಮ ನಿಲ್ದಾಣದಲ್ಲಿ ಅರೆಕ್ಷಣ ಆತಂಕದ ವಾತಾವರಣ ಸೃಷ್ಟಿಯಾಗಿದ್ದು, ಪ್ರಯಾಣ ತಡವಾಗಿದ್ದಕ್ಕೆ ಎಲ್ಲ ಪ್ರಯಾಣಿಕರ ಬಳಿ ಡೆಲ್ಟಾ ವಿಮಾನದ ಸಿಬ್ಬಂದಿ ಕ್ಷಮೆಯಾಚಿಸಿದ್ದಾರೆ. ಈ ಸಂಬಂಧ ಸೂಕ್ತ ತನಿಖೆ ಕೈಗೊಳ್ಳಲಾಗುತ್ತದೆ ಎಂದು ಸೀಟಾಕ್ ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.