ಐಫೊನ್ ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಈ ಸರಿ ಏನಾದ್ರು ಪರವಾಗಿಲ್ಲ ಸ್ಯಾಲರಿ ಆದ ತಕ್ಷಣ ಐಫೋನ್ ತಗೋಳ್ಳೋದೆ.. ಮಿರರ್ ಮುಂದೆ ನಿಂತು ಸೆಲ್ಫಿ ತಗೊಂಡು ನಂದೂ ಒಂದ್ ಇರಲಿ ಎಂದು ಜಾಲತಾಣದಲ್ಲದನ್ನ ಪೋಸ್ಟ್ ಮಾಡೋದೆ ಅಂತಾ ಸಾಕಷ್ಟು ಜನ ಕಾಯ್ತಾ ಇರ್ತಾರೆ. ಅಂತಾ ಐಫೋನ್ ಪ್ರಿಯರಿಗೆ ಆ್ಯಪಲ್ ಕಂಪನಿ ಗುಡ್ ನ್ಯೂಸ್ ನೀಡಿದೆ.
ಹೌದು, ಬೆಲೆ ಏರಿಕೆಯಿಂದಾಗಿ ಸಾಕಷ್ಟು ಜನರಿಗೆ ಐಫೋನ್ ಕನಸಾಗಿದೆ. ಆದ್ರೆ, ಇಂತಹವರಿಗಾಗಿ ಆ್ಯಪಲ್ ಕಂಪನಿಯ ಫೋನ್‌ಗಳ ಮೇಲೆ ಬಂಪರ್ ರಿಯಾಯಿತಿ ಘೋಷಿಸಿದೆ.
ಐಫೋನ್ 15 ಬೆಲೆಯಲ್ಲಿ ಭಾರಿ ಕುಸಿತ ಕಂಡಿದೆ. ಹೌದು, ಈ ಫೋನನ್ನ ರೂ.35,099 ರಿಯಾಯಿತಿಯಲ್ಲಿ ಈಗ ಖರೀದಿಸಬಹುದು. ಐಫೋನ್ 15 ಪ್ರೊ ಮಾದರಿಯನ್ನು ರಿಲಯನ್ಸ್ ಡಿಜಿಟಲ್ ವೆಬ್‌ಸೈಟ್‌ನಲ್ಲಿ ಗಮನ ಸೆಳೆಯುವ ರಿಯಾಯಿತಿಯೊಂದಿಗೆ ನೀಡುತ್ತಿದೆ.
ಇ-ಕಾಮರ್ಸ್ ಸೈಟ್‌ಗಳಿಗಿಂತ ಕಡಿಮೆ ಬೆಲೆಯಲ್ಲಿ ಐಫೋನ್ 15 ಪ್ರೊ ನೀಡುತ್ತದೆ. iPhone 15 Pro ಮಾದರಿಯನ್ನು ಭಾರತದಲ್ಲಿ ರೂ.1,34,999 ಬೆಲೆಗೆ ಬಿಡುಗಡೆ ಮಾಡಲಾಗಿದೆ. ಆದರೆ ಈಗ ಕೇವಲ ರೂ. 99,900 ಪಟ್ಟಿ ಮಾಡಲಾಗಿದೆ. ಅಂದರೆ ಗ್ರಾಹಕರು ಈಗ ಐಫೋನ್ 15 ಪ್ರೋ ಅನ್ನು 35,099 ರೂಪಾಯಿಗಳ ಭಾರೀ ರಿಯಾಯಿತಿಯಲ್ಲಿ ಖರೀದಿಸಬಹುದು.