ವೈರಲ್

ಉಡುಪಿ: ಇನ್ನೊಬ್ಬರ ಜೀವ ಉಳಿಸಲು ಹೋಗಿ ತನ್ನ ಜೀವವನ್ನೇ ತೆತ್ತ ಶಿಕ್ಷಕಿ ಅರ್ಚನಾ ಕಾಮತ್

ಉಡುಪಿ: ಮಹಿಳೆಯೊಬ್ಬರ ಜೀವ ಉಳಿಸಲು ಹೋಗಿ ಶಿಕ್ಷಕಿ ತನ್ನ ಪ್ರಾಣವನ್ನೇ ಕಳೆದುಕೊಂಡ ಘಟನೆ ಉಡುಪಿಯ ಕುಂದಾಪುರದಲ್ಲಿ ನಡೆದು ಹೋಗಿದೆ. ಏನಿದು ಘಟನೆ..? ಇಲ್ಲಿದೆ ನೋಡಿ..

ಕುಂದಾಪುರ  ತಾಲೂಕಿನ ಕೊಟೇಶ್ವರದ ಅರ್ಚನಾ ಕಾಮತ್ (34) ಮೃತಪಟ್ಟ ದುರ್ದೈವಿ. ಇವರು ಮಂಗಳೂರಿನ ಕಾಲೇಜ್ ಒಂದರಲ್ಲಿ ಉಪನ್ಯಾಸಕಿಯಾಗಿ ಕರ್ತವ್ಯ  ನಿರ್ವಹಿಸುತ್ತಿದ್ದರು.

ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ 69 ವರ್ಷದ ಹಿರಿಯ ಸಂಬಂಧಿಕ ಮಹಿಳೆಗೆ ಯಕೃತ್ತಿನ ಕಸಿಗೆ ದಾನಿಯಾಗಲು ಇವರು ಬಯಸಿದ್ದರು ಅಂತಾ ಹೇಳಲಾಗ್ತಿದೆ. ಯಕೃತ್ ದಾನ ಮಾಡಲು ಮಂಗಳೂರಿನ ಆಸ್ಪತ್ರೆಗೆ ದಾಖಲಾಗಿದ್ದರು ಅರ್ಚನಾ. ಆದರೆ ದುರಂತ ನೋಡಿ ಯಾರ ಪ್ರಾಣವನ್ನು ಉಳಿಸಲು ಬಂದಿದ್ದ ಈ ಅರ್ಚನಾ, ಆಸ್ಪತ್ರೆಯಲ್ಲಿ ಸೋಂಕಿಗೆ ತುತ್ತಾಗಿ ತನ್ನ ಅಮೂಲ್ಯವಾದ ಜೀವವನ್ನೇ ಕಳೆದುಕೊಂಡಿದ್ದಾರೆ