ಜಮ್ಮು-ಕಾಶ್ಮೀರದ ಪುಂಚನಲ್ಲಿ ಆರ್ಮಿ ವಾಹನ ಅಪಘಾತಕ್ಕೀಡಾಗಿದ್ದು, ಐವರು ಯೋಧರು ಸಾವನ್ನಪ್ಪಿದ್ದಾರೆ. ಪುಂಚ್ ಪ್ರದೇಶದಲ್ಲಿ ಮಂಜುಗಡ್ಡೆಯಲ್ಲಿ ಜಾರಿ 300 ಅಡಿ ಕಂದಕಕ್ಕೆ ಆರ್ಮಿ ವಾಹನ ಉರುಳಿದ್ದು, ಮರಾಠಾ ರೆಜಮೇಂಟನ ಐವರು ಮೃತಪಟ್ಟಿದ್ದಾರೆ.
ಐವರಲ್ಲಿ ಮೂವರು ಕರ್ನಾಟದ ಯೋಧರು ಕೂಡ ಮೃತಪಟ್ಟಿದ್ದು, ಮೃತ ಯೋಧರನ್ನ ಬೆಳಗಾವಿಯ ಪಂತ ಬಾಳೆಕುಂದ್ರಿಯ ಧಯಾನಂದ ತಿರಕನ್ನವರ್(45), ಉಡಪಿ ಅನೂಪ್ 33 ಮತ್ತು ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪೂರದ ಮಹೇಶ್ ಮರಿಗುಂಡ್(25) ಎಂದು ಗುರುತಿಸಲಾಗಿದೆ. ಇನ್ನುಳಿದ ಇಬ್ಬರು ಮಹಾರಾಷ್ಟ್ರದ ನಾಗಪೂರ್ ಮತ್ತು ಸಾತಾರ ಜಿಲ್ಲೆಯವರು ಎಂದು ತಿಳಿದುಬಂದಿದೆ.