ಕರ್ನಾಟಕ
ಜಸ್ಟ್ ಮ್ಯಾರೀಡ್ ಚಿತ್ರಕ್ಕೆ ಅಶ್ವಿನಿ ಪುನೀತ್ ರಾಜಕುಮಾರ್ ಸಾಥ್..!
.ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಜೋಡಿಯ "ಜಸ್ಟ್ ಮ್ಯಾರೀಡ್" ಚಿತ್ರಕ್ಕಾಗಿ ಪ್ರೇಮಕವಿ ಕೆ.ಕಲ್ಯಾಣ್ ಬರೆದಿರುವ "ಇದು ಮೊದಲನೇ ಸ್ವಾಗತಾನಾ" ಎಂಬ ಹಾಡು ಬಿಡುಗಡೆಯಾಗಿದೆ.
ವಿಶ್ವವೇ ಮೆಚ್ಚಿದ "ಕಾಂತಾರ" ಚಿತ್ರ ಸೇರಿದಂತೆ ಸೂಪರ್ ಹಿಟ್ ಚಿತ್ರಗಳಿಗೆ ಸಂಗೀತ ನೀಡಿರುವ ಅಜನೀಶ್ ಲೋಕನಾಥ್ abbs studios ಲಾಂಛನದಲ್ಲಿ ಸಿ.ಆರ್ ಬಾಬಿ ಅವರ ಜೊತೆಗೂಡಿ ನಿರ್ಮಿಸಿರುವ ಹಾಗೂ ಸಿ.ಆರ್.ಬಾಬಿ ನಿರ್ದೇಶಿಸಿರುವ ಚಿತ್ರ ಜಸ್ಟ್ ಮ್ಯಾರೀಡ್.ಬಿಗ್ ಬಾಸ್ ಖ್ಯಾತಿಯ ಶೈನ್ ಶೆಟ್ಟಿ ಹಾಗೂ ಅಂಕಿತ ಅಮರ್ ಜೋಡಿಯ "ಜಸ್ಟ್ ಮ್ಯಾರೀಡ್" ಚಿತ್ರಕ್ಕಾಗಿ ಪ್ರೇಮಕವಿ ಕೆ.ಕಲ್ಯಾಣ್ ಬರೆದಿರುವ "ಇದು ಮೊದಲನೇ ಸ್ವಾಗತಾನಾ" ಎಂಬ ಹಾಡು ಬಿಡುಗಡೆಯಾಗಿದೆ.
ಈ ಸುಂದರ ಯುಗಳಗೀತೆಯನ್ನು ಬಿಡುಗಡೆ ಮಾಡಿದ ಅಶ್ವಿನಿ ಪುನೀತ್ ರಾಜಕುಮಾರ್ ಅವರು, "ಇದು ಮೊದಲನೇ ಸ್ವಾಗತನಾ" ಹಾಡು ತುಂಬಾ ಚೆನ್ನಾಗಿದೆ. ಬಾಬಿ ಅವರ ನಿರ್ದೇಶನದಲ್ಲಿ ಹಾಗೂ ಅಜನೀಶ್ ಲೋಕನಾಥ್ ನಿರ್ಮಾಣದಲ್ಲಿ ಮೂಡಿಬಂದಿರುವ "ಜಸ್ಟ್ ಮ್ಯಾರೀಡ್" ಚಿತ್ರದ ಬಿಡುಗಡೆಗೆ ನಾನು ಕಾತುರದಿಂದ ಕಾಯುತ್ತಿದ್ದೇನೆ ಎಂದರು.
ಈ ಹಾಡಿನ ಚಿತ್ರೀಕರಣ ಬೆಂಗಳೂರಿನಲ್ಲೇ ನಡೆದಿದೆ. ಈ ಹಾಡಿಗೆ ಸಿಆರ್ ಬಾಬಿ ನೃತ್ಯ ನಿರ್ದೇಶನ ಮಾಡಿದ್ದು, ಕೆ.ಕಲ್ಯಾಣ್ ಸಾಹಿತ್ಯ ಬರೆದಿದ್ದಾರೆ.. ಜಸ್ಕರಣ್ ಸಿಂಗ್ ಕಂಠಸಿರಿಯಲ್ಲಿ ಹಾಡು ಮೂಡಿಬಂದಿದೆ.ಶೈನ್ ಶೆಟ್ಟಿ, ಅಂಕಿತ ಅಮರ್, ದೇವರಾಜ್, ಅಚ್ಯುತಕುಮಾರ್, ಮಾಳವಿಕ ಅವಿನಾಶ್, ಅನೂಪ್ ಭಂಡಾರಿ, ಶ್ರುತಿ ಹರಿಹರನ್, ಶ್ರುತಿ ಕೃಷ್ಣ, ಸಾಕ್ಷಿ ಅಗರವಾಲ್, ಶ್ರೀಮಾನ್, ರವಿಶಂಕರ್ ಗೌಡ, ರವಿ ಭಟ್, ವಾಣಿ ಹರಿಕೃಷ್ಣ, ಸಂಗೀತ ಅನಿಲ್, ಕುಮುದಾ, ಜಯರಾಮ್, ವೇದಿಕಾ ಕಾರ್ಕಳ್ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.