ಕರ್ನಾಟಕ

ಬಾಕಿ ಬಿಲ್‌ ಕಟ್ಟಿ ಎಂದಿದ್ದಕ್ಕೆ ಕೆಇಬಿ ಸಿಬ್ಬಂದಿ ಮೇಲೆ ಹಲ್ಲಗೆ ಯತ್ನ..!

ಬಾಕಿ ಬಿಲ್‌ ಕೇಳಿದ್ದಕ್ಕೆ ಶಿವಕುಮಾರ್‌ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.

ವಿದ್ಯುತ್‌ ಬಿಲ್‌ ಕಟ್ಟಿ ಎಂದಿದ್ದಕ್ಕೆ ಕೆಇಬಿ ಸಿಬ್ಬಂದಿ ಮೇಲೆ ದಂಪತಿ ದರ್ಪ ತೋರಿರುವ ಘಟನೆ, ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್‌ ಗ್ರಾಮದಲ್ಲಿ  ನಡೆದಿದೆ. ಬಾಕಿ ಬಿಲ್‌ ಕೇಳಿದ್ದಕ್ಕೆ ಶಿವಕುಮಾರ್‌ ಎಂಬುವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ ಎನ್ನಲಾಗುತ್ತಿದೆ.  

ಮಂಜು ಎಂಬುವರು  ಗೃಹ ಜ್ಯೋತಿ ಯೋಜನೆ ಜಾರಿಗೂ ಮೊದಲಿನಿಂದಲೂ, ಕರೆಂಟ್‌ ಬಿಲ್‌ ಪೆಂಡಿಂಗ್‌ ಉಳಿಸಿಕೊಂಡಿದ್ದರು. ಅಲ್ಲದೇ ಗೃಹ ಜ್ಯೋತಿ‌ ಯೋಜನೆಗೂ ಅರ್ಜಿ ‌ಹಾಕದೇ ನಿರ್ಲಕ್ಷ್ಯ ವಹಿಸಿದ್ದರು. ಎಲ್ಲ ಸೇರಿ ಒಂಭತ್ತು ಸಾವಿರ ರೂ. ಬಾಕಿ ಉಳಿಸಿಕೊಂಡಿದ್ದರು. ಬಿಲ್‌ ಕಟ್ಟದೇ ಬಾಕಿ  ಉಳಿಸಿಕೊಂಡಿರುವುದಲ್ಲದೇ, ದರ್ಪ ಕೂಡ ತೋರಿಸಿದ್ದಾರೆ.