ಕದ್ದ ಎಟಿಎಂ ಮಷಿನ್ ಬಿಟ್ಟು ಕಳ್ಳರು ಎಸ್ಕೇಪ್ ಆಗಿರುವ ಘಟನೆ, ಬೆಂಗಳೂರು ಹೊರವಲಯದ ಆನೇಕಲ್ ತಾಲೂಕಿನ ಮಂಚನಹಳ್ಳಿಯಲ್ಲಿ ನಡೆದಿದೆ. ಕಳ್ಳರು ಕದ್ದ ಎಟಿಎಂ ಮಷಿನ್ ನ ಸಮೀಪದ ನೀಲಗಿರಿ ತೋಪಿಗೆ ಹೊತ್ತೊಯ್ದಿದ್ದಾರೆ. ಆಕ್ಸಲ್ ಬ್ಲೇಡ್ ನಿಂದ ಎಟಿಎಂ ಮೆಷಿನ್ ತುಂಡರಿಸಲು ಯತ್ನಿಸಿದ್ದಾರೆ. ಕೊನೆಗೆ ಬೆಳಕಾಗುತ್ತಲೇ ಸ್ಥಳೀಯರನ್ನುಕಂಡು ಎಸ್ಕೇಪ್ ಆಗಿದ್ದಾರೆ.
ಕೆನರಾ ಬ್ಯಾಂಕ್ ಗೆ ಸೇರಿದ ಎಟಿಎಂ ಮಷಿನ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ಹಣವಿದ್ದು, ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.