ಕ್ರೀಡೆಗಳು

ಅಡಿಲೇಡ್‌ ಟೆಸ್ಟ್‌ನಲ್ಲಿ ಮುಗ್ಗರಿಸಿದ ಭಾರತ… ಆಸಿಸ್‌ಗೆ 10 ವಿಕೆಟ್‌ ಜಯ

ಪರ್ತ್‌ ಟೆಸ್ಟ್‌ ನಲ್ಲಿ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ ಅಡಿಲೇಡ್‌ ನಲ್ಲಿ ನಡೆದ 2 ನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್‌ ಅಂತರದ ​ಹೀನಾಯ ಸೋಲನುಭವಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್‌ ಸರಣಿ1-1 ರಿಂದ ಸಮಗೊಂಡಿದೆ.

ಅಡಿಲೇಡ್‌: ಪರ್ತ್‌ ಟೆಸ್ಟ್‌ ನಲ್ಲಿ ಭರ್ಜರಿ ಜಯ ಸಾಧಿಸಿದ್ದ ಟೀಂ ಇಂಡಿಯಾ ಅಡಿಲೇಡ್‌ ನಲ್ಲಿ ನಡೆದ 2 ನೇ ಟೆಸ್ಟ್‌ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ 10 ವಿಕೆಟ್‌ ಅಂತರದ ಹೀನಾಯ ಸೋಲನುಭವಿಸಿದೆ. ಈ ಮೂಲಕ 5 ಪಂದ್ಯಗಳ ಟೆಸ್ಟ್‌ ಸರಣಿ1-1 ರಿಂದ ಸಮಗೊಂಡಿದೆ.

ಟೀಂ ಇಂಡಿಯಾ ನೀಡಿದ 19 ರನ್‌ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಕೇವಲ 3.2 ಓವರ್‌ ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 19 ರನ್‌ ಗಳಿಸಿ ಜಯ ಗಳಿಸಿತು. ಎರಡನೇ ದಿನದಾಟದಂತ್ಯಕ್ಕೆ ಟೀಂ ಇಂಡಿಯಾ 2 ನೇ ಇನಿಂಗ್ಸ್‌ ನಲ್ಲಿ 5 ವಿಕೆಟ್‌ ನಷ್ಟಕ್ಕೆ 128 ರನ್‌ ಗಳಿಸಿತ್ತು. ಮೂರನೇ ದಿನಟಾದಲ್ಲಿ ಭಾರತ ತಂಡ 175 ರನ್‌ ಗಳಿಸಿ ಆಲೌಟಾಯಿತು. ಟೀಂ ಇಂಡಿಯಾ ಪರ ಆಲ್ರೌಂಡರ್‌ ನಿತೀಶ್‌ ಕುಮಾರ್‌ ರೆಡ್ಡಿ 42 ರನ್‌ ಗಳಿಸಿತು. ರೆಡ್ಡಿ ಮೊದಲ ಇನಿಂಗ್ಸ್‌ ನಲ್ಲೂ 42 ರನ್‌ ಗಳಿಸಿದ್ದರು.

ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡಿದ್ದ ಭಾರತ ತಂಡ ಮೊದಲ ಇನಿಂಗ್ಸ್‌ ನಲ್ಲಿ 180 ರನ್‌ ಗಳಿಸಿ ಆಲೌಟಾಗಿತ್ತು. ಆಸ್ಟ್ರೇಲಿಯಾ ತಂಡ ಮೊದಲ ಇನಿಂಗ್ಸ್‌ ನಲ್ಲಿ 337 ರನ್‌ ಗಳಿಸಿ ಭರ್ಜರಿ ಮುನ್ನಡೆ ಸಾಧಿಸಿತ್ತು.