ಕ್ರೀಡೆಗಳು

ಬಾಕ್ಸಿಂಗ್‌ ಡೇ ಟೆಸ್ಟ್‌… ಪ್ಲೇಯಿಂಗ್‌ ಇಲೆವೆನ್‌ ಪ್ರಕಟಿಸಿದ ಆಸ್ಟ್ರೇಲಿಯಾ

ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಆರಂಭವಾಗಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ಲೇಯಿಂಗ್‌ ಇಲೆವೆನ್‌ ಪ್ರಕಟಿಸಿದೆ.

ಮೆಲ್ಬೋರ್ನ್‌: ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಾಳೆಯಿಂದ ಆರಂಭವಾಗಲಿರುವ ಬಾಕ್ಸಿಂಗ್‌ ಡೇ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ಪ್ಲೇಯಿಂಗ್‌ ಇಲೆವೆನ್‌ ಪ್ರಕಟಿಸಿದೆ.

ಬಾಕ್ಸಿಂಗ್‌ ಡೇ ಪಂದ್ಯಕ್ಕಾಗಿ ಆಸ್ಟ್ರೇಲಿಯಾ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಮೂರನೇ ಟೆಸ್ಟ್‌ ವೇಳೆ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದ ವೇಗಿ ಜೋಶ್ಹ್ಯಾಜಲ್ವುಡ್ಅವರ ಸ್ಥಾನದಲ್ಲಿ ಸ್ಕಾಟ್ ಬೋಲ್ಯಾಂಡ್ ಆಡಲಿದ್ದಾರೆ. ಆರಂಭಿಕ ಆಟಗಾರನಾಗಿ . 19 ವರ್ಷದ ಸ್ಯಾಮ್ಕೋನ್ಸ್ಟಾಸ್ಕೂಡ ಆಡುವ ಬಳಗದಲ್ಲಿ ಅವಕಾಶ ಪಡೆದುಕೊಂಡಿದ್ದಾರೆ. ಇದು ಅವರ ಪದಾರ್ಪಣ ಪಂದ್ಯವಾಗಿದೆ.

ಸರಣಿಯುದ್ದಕ್ಕೂ ಭಾರತ ತಂಡವನ್ನು ಕಾಡಿರುವ ಆಸಿಸ್‌ ಬ್ಯಾಟರ್‌ ಟ್ರಾವಿಸ್‌ ಹೆಡ್‌ ಮೂರನೇ ಟೆಸ್ಟ್‌ ವೇಳೆ ಗಾಯಗೊಂಡಿದ್ದರು. ಆದರೆ ಹೆಡ್‌ ಗಾಯದಿಂದ ಚೇತರಿಸಿಕೊಂಡಿದ್ದು ಫಿಟ್‌ ಆಗಿದ್ದಾರೆ. ಈ ಹಿನ್ನೆಲೆಯಲ್ಲಿ ನಾಲ್ಕನೇ ಟೆಸ್ಟ್‌ ನಲ್ಲಿ ಅವರು ಕಣಕ್ಕಿಳಿಯಲಿದ್ದಾರೆ.

ಆಸ್ಟ್ರೇಲಿಯಾ ತಂಡದ ಪರ ಡೆಬ್ಯೂ ಮಾಡಲಿರುವ ಸ್ಯಾಮ್‌ ಕೋನ್‌ ಸ್ಟಾಸ್‌ ಡಿಸೆಂಬರ್ 2024 ರಲ್ಲಿ, ಬಿಗ್ ಬ್ಯಾಷ್ ಲೀಗ್ನಲ್ಲಿ ಸಿಡ್ನಿ ಥಂಡರ್ಪರ ಪದಾರ್ಪಣೆ ಮಾಡಿದ್ದರು. ಆಸೀಸ್‌ನ ಯುವ ಆಟಗಾರ ಭಾರತ ವಿರುದ್ಧದ ಅನಧಿಕೃತ ಟೆಸ್ಟ್ ದ್ವಿತೀಯ ಪಂದ್ಯದಲ್ಲಿ 73 ರನ್ಗಳಿಸಿದ್ದರು. ಜತೆಗೆ ಭಾರತ ಮತ್ತು ಪ್ರೈಮ್ ಮಿನಿಸ್ಟರ್ಸ್ XI ನಡುವೆ ನಡೆದಿದ್ದ ಅಭ್ಯಾಸ ಪಂದ್ಯದಲ್ಲೂ ಶತಕ ಬಾರಿಸಿದ್ದರು.

ಆಸ್ಟ್ರೇಲಿಯಾ ತಂಡ

ಉಸ್ಮಾನ್ ಖವಾಜಾ, ಸ್ಯಾಮ್ಕೋನ್ಸ್ಟಾಸ್‌, ಮಾರ್ನಸ್ ಲಬುಶೇನ್‌, ಸ್ಟೀವನ್ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ಮಾರ್ಷ್, ಅಲೆಕ್ಸ್ ಕ್ಯಾರಿ (ವಿ.ಕೀ), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಾಥನ್ ಲಿಯಾನ್, ಸ್ಕಾಟ್ ಬೋಲ್ಯಾಂಡ್.