ಕ್ರೀಡೆಗಳು

ಪಿಂಕ್‌ಬಾಲ್‌ ಟೆಸ್ಟ್‌ಗೆ ಆಸಿಸ್‌ ತಂಡ ಪ್ರಕಟ… ಸ್ಕಾಟ್‌ ಬೋಲ್ಯಾಂಡ್‌ಗೆ ಸ್ಥಾನ

ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೂರ್ನಿಯ 2 ನೇ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ವೇಗದ ಬೌಲರ್‌ ಸ್ಕಾಟ್‌ ಬೋಲ್ಯಾಂಡ್‌ಗೆ ಸ್ಥಾನ ಸಿಕ್ಕಿದೆ.

ಅಡಿಲೇಡ್‌: ಬಾರ್ಡರ್‌ ಗವಾಸ್ಕರ್‌ ಟ್ರೋಫಿ ಟೂರ್ನಿಯ 2 ನೇ ಟೆಸ್ಟ್‌ ಪಂದ್ಯಕ್ಕೆ ಆಸ್ಟ್ರೇಲಿಯಾ ತಂಡ ತನ್ನ ಆಡುವ 11ರ ಬಳಗವನ್ನು ಪ್ರಕಟಿಸಿದ್ದು, ವೇಗದ ಬೌಲರ್‌ ಸ್ಕಾಟ್‌ ಬೋಲ್ಯಾಂಡ್‌ಗೆ ಸ್ಥಾನ ಸಿಕ್ಕಿದೆ.

ಪರ್ತ್‌ ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಸೋತಿರುವ ಆಸೀಸ್ತಂಡ ಅಡಿಲೇಡ್‌ ನಲ್ಲಿ ನಡೆಯಲಿರುವ ಎರಡನೇ ಪಂದ್ಯದಲ್ಲಿ ಸೇಡು ತೀರಿಸಿಕೊಳ್ಳುವ ತವಕದಲ್ಲಿದೆ. ದ್ವಿತೀಯ ಟೆಸ್ಟ್‌ನಲ್ಲಿ ಆಡುವ ತಂಡವನ್ನು ಪ್ರಕಟಿಸಿದ್ದು ತಂಡದಲ್ಲಿ ಏಕಮಾತ್ರ ಬದಲಾವಣೆ ಮಾಡಲಾಗಿದೆ. ಗಾಯಗೊಂಡು ಸರಣಿಯಿಂದ ಹೊರಬಿದ್ದಿರುವ ಜೋಶ್ ಹ್ಯಾಜಲ್ವುಡ್ ಸ್ಥಾನಕ್ಕೆ ವೇಗಿ ಸ್ಕಾಟ್ ಬೋಲ್ಯಾಂಡ್ ಸ್ಥಾನ ಪಡೆದಿದ್ದಾರೆ. ಈ ಮೂಲಕ 18 ತಿಂಗಳ ಬಳಿಕ ಬೋಲ್ಯಾಂಡ್ ಆಸ್ಟ್ರೇಲಿಯಾ ತಂಡಕ್ಕೆ ಪುನರಾಗಮನ ಮಾಡಿದರು.

ಇನ್ನು ಫಿಟ್ನೆಸ್ಆತಂಕದಲ್ಲಿದ್ದ ಮಿಷೆಲ್ ಮಾರ್ಷ್ ಫಿಟ್ಆಗಿದ್ದು ತಂಡದಲ್ಲೇ ಮುಂದುವರಿದಿದ್ದಾರೆ. ಅಭ್ಯಾಸದ ವೇಳೆ ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿದ್ದ ಅನುಭವಿ ಆಟಗಾರ ಸ್ಟೀವನ್ಸ್ಮಿತ್ಗಾಯದಿಂದ ಚೇತರಿಸಿಕೊಂಡು ಆಡುವ ಬಳಗದಲ್ಲಿ ಕಾಣಿಸಿಕೊಂಡಿದ್ದಾರೆ.

ಆಸ್ಟ್ರೆಲಿಯಾ ತಂಡ ಇದುವರೆಗೆ 12 ಪಿಂಕ್ಬಾಲ್ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಪೈಕಿ 11ರಲ್ಲಿ ಗೆದ್ದಿದೆ. ವೆಸ್ಟ್ ಇಂಡೀಸ್ ವಿರುದ್ಧ ಬ್ರಿಸ್ಬೇನ್ನಲ್ಲಿ ಆಡಿದ ತನ್ನ ಕೊನೇ ಪಿಂಕ್ಬಾಲ್ ಟೆಸ್ಟ್ನಲ್ಲಿ ಆಸೀಸ್ ಸೋಲು ಕಂಡಿತ್ತು. ಅಡಿಲೇಡ್‌ ಟೆಸ್ಟ್‌ ನಲ್ಲಿ ಗೆಲುವು ಸಾಧಿಸಿ ತನ್ನ ಸರಣಿಯಲ್ಲಿ ಸಮಬಲ ಸಾಧಿಸಲು ಆಸಿಸ್‌ ತಂಡ ಪ್ರಯತ್ನಿಸಲಿದೆ. ಆದರೆ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಮೊದಲ ಎರಡು ದಿನವಾದ ಶುಕ್ರವಾರ ಮತ್ತು ಶನಿವಾರ ಅಡಿಲೇಡ್‌ ನಲ್ಲಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಆಸ್ಟ್ರೇಲಿಯಾ ತಂಡ

ಉಸ್ಮಾನ್ ಖ್ವಾಜಾ, ನೇಥನ್ ಮೆಕ್ಸ್ವೀನಿ, ಮಾರ್ನಲ್ ಲಬುಶೇನ್‌, ಸ್ಟೀವನ್ಸ್ಮಿತ್, ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್, ಅಲೆಕ್ಸ್ ಕ್ಯಾರಿ (ವಿಕೆಟ್ ಕೀಪರ್), ಪ್ಯಾಟ್ ಕಮಿನ್ಸ್ (ನಾಯಕ), ಮಿಚೆಲ್ ಸ್ಟಾರ್ಕ್, ನಥಾನ್ ಲಿಯೋನ್‌, ಸ್ಕಾಟ್ ಬೋಲ್ಯಾಂಡ್.