ಕ್ರೀಡೆಗಳು

ಅಂತಿಮ ಪಂದ್ಯಕ್ಕೆ ಮುನ್ನ ಭಾರತ-ಆಸೀಸ್‌ ಆಟಗಾರರ ಭೇಟಿಯಾದ ಪ್ರಧಾನಿ

ಎರಡೂ ತಂಡಗಳು ಈಗಾಗಲೇ ಆಸ್ಟ್ರೇಲಿಯಾದ ಜನರಿಗೆ ಕ್ರಿಕೆಟ್‌ನ ನಂಬಲಾಗದ ಮನರಂಜನೆಯನ್ನ ನೀಡಿವೆ ಎಂದು ಉಲ್ಲೇಖಿಸಿದ್ದಾರೆ..

ಆಸ್ಟ್ರೇಲಿಯಾದ ಸಿಡ್ನಿಯಲ್ಲಿ ನಡೆಯುತ್ತಿರುವ ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಪಂದ್ಯಕ್ಕೂ ಮುನ್ನ ಭಾರತ ಮತ್ತು ಆಸೀಸ್‌ ತಂಡಗಳ ಆಟಗಾರರನ್ನ ಆಸ್ಟ್ರೇಲಿಯಾದ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ಭೇಟಿಯಾಗಿದ್ದಾರೆ.. ಸೋಷಿಯಲ್‌ ಮೀಡಿಯಾದಲ್ಲಿ ಈ ಬಗ್ಗೆ ಬರೆದುಕೊಂಡಿರುವ ಆಂಥೋನಿ ಅಲ್ಬನೀಸ್, ಎರಡೂ ತಂಡಗಳು ಈಗಾಗಲೇ ಆಸ್ಟ್ರೇಲಿಯಾದ ಜನರಿಗೆ ಕ್ರಿಕೆಟ್‌ನ ನಂಬಲಾಗದ ಮನರಂಜನೆಯನ್ನ ನೀಡಿವೆ ಎಂದು ಉಲ್ಲೇಖಿಸಿದ್ದಾರೆ.. ಶುಕ್ರವಾರ ಆರಂಭವಾಗಲಿರುವ 5ನೇ ಮತ್ತು ಬಾರ್ಡರ್-ಗವಾಸ್ಕರ್ ಟ್ರೋಫಿಯ ಅಂತಿಮ ಟೆಸ್ಟ್‌ಗೂ ಮುನ್ನ 2 ತಂಡಗಳ ಆಟಗಾರರಿಗೆ ವಿಶೇಷ ಔತಣಕೂಟ ಏರ್ಪಡಿಸಲಾಗಿತ್ತು.. ಅಂತಿಮ ಹಂತದ ಪಂದ್ಯದ ರಿಸಲ್ಟ್‌ ಮೇಲೆಯೇ ಭಾರತವು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೆ ಅರ್ಹತೆ ಪಡೆಯುತ್ತದೆಯೇ ಅಥವಾ ಇಲ್ಲವೇ ಎಂಬುದು ನಿರ್ಣಾಯಕವಾಗಿರುತ್ತದೆ, ಏಕೆಂದರೆ ಈ ಟೆಸ್ಟ್‌ನಲ್ಲಿ ಭಾರತ ಗೆಲ್ಲಲೇಬೇಕು. ಬ್ರಿಸ್ಬೇನ್‌ನಲ್ಲಿ ನಡೆದ ಪಂದ್ಯ ಡ್ರಾದಲ್ಲಿ ಸಾಗಿದ್ದರಿಂದ ಆಸ್ಟ್ರೇಲಿಯ ಪ್ರಸ್ತುತ ಸರಣಿಯಲ್ಲಿ 2-1 ರಿಂದ ಮುನ್ನಡೆಯಲ್ಲಿದೆ..