ಕ್ರೀಡೆಗಳು

ಆಸ್ಟ್ರೇಲಿಯಾ ಪ್ರಧಾನಿ ವಿರಾಟ್‌ ಕೊಹ್ಲಿ ಆಟೋಗ್ರಾಫ್‌ ಪಡೆದಿದ್ದೇಕೆ…?

ಟೀಂ ಇಂಡಿಯಾ ಆಟಗಾರರು ತಮ್ಮನ್ನು ಭೇಟಿ ಮಾಡಿದ್ದ ವೇಳೆ ಆಸ್ಟ್ರೇಲಿಯಾ ಪಿಎಂ ಕೊಹ್ಲಿಯ ಆಟೋಗ್ರಾಫ್‌ ಪಡೆದಿದ್ದರು. ಆಟೋಗ್ರಾಫ್‌ ಪಡೆದಿದ್ದೇಕೆ ಅನ್ನೋ ವಿಷಯವನ್ನ ಸ್ವತಃ ಅಲ್ಬನೀಸ್‌ ಬಹಿರಂಗ ಪಡಿಸಿದ್ದಾರೆ.

ಕ್ಯಾನ್‌ಬೆರಾ: ಆಸ್ಟ್ರೇಲಿಯಾ ಪ್ರವಾಸದಲ್ಲಿರುವ ಭಾರತ ತಂಡದ ಆಟಗಾರರು ಇತ್ತೀಚೆಗೆ ಆಸ್ಟ್ರೇಲಿಯಾ ಪ್ರಧಾನ ಮಂತ್ರಿ ಆಂಥೋನಿ ಅಲ್ಬನೀಸ್ ರನ್ನು ಭೇಟಿ ಮಾಡಿದ್ದರು. ಭೇಟಿ ವೇಳೆ ಆಸ್ಟ್ರೇಲಿಯಾ ಪಿಎಂ ಕೊಹ್ಲಿಯ ಆಟೋಗ್ರಾಫ್‌ ಪಡೆದಿದ್ದರು. ಆಟೋಗ್ರಾಫ್‌ ಪಡೆದಿದ್ದೇಕೆ ಅನ್ನೋ ವಿಷಯವನ್ನ ಸ್ವತಃ ಅಲ್ಬನೀಸ್‌ ಬಹಿರಂಗ ಪಡಿಸಿದ್ದಾರೆ.

ಪರ್ತ್‌ ನಲ್ಲಿ ಮೊದಲ ಟೆಸ್ಟ್‌ ಜಯಗಳಿಸಿದ ಬಳಿಕ ನವೆಂಬರ್‌ 28 ರಂದು ಭಾರತ ತಂಡ ಕ್ಯಾನ್‌ಬೆರಾದಲ್ಲಿ ಆಸ್ಟ್ರೇಲಿಯಾ ಪ್ರಧಾನಿಯನ್ನು ಭೇಟಿ ಮಾಡಿತ್ತು. ಈ ವೇಳೆ ಟೀಂ ಇಂಡಿಯಾದ ಆಟಗಾರರು ಆಂಥೋನಿ ಅಲ್ಬನೀಸ್‌ ಅವರೊಂದಿಗೆ ಮಾತುಕತೆ ನಡೆಸಿದ್ದರು.  ಆ ಬಳಿಕ ಟಿಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ಪಿಎಂ ಇಲೆವೆನ್‌ ತಂಡಗಳ ನಡುವೆ ನಡೆದ ಪಂದ್ಯದ ವೇಳೆಯಲ್ಲೂ ಆಟಗಾರರನ್ನು ಆಸ್ಟ್ರೇಲಿಯಾ ಪಿಎಂ ಭೇಟಿಯಾಗಿದ್ದರು. ಈ ಭೇಟಿಯ ವೇಳೆ ಅಲ್ಬನೀಸ್‌ ಅವರು ವಿರಾಟ್‌ ಕೊಹ್ಲಿಯ ಆಟೋಗ್ರಾಫ್‌ ಪಡೆದುಕೊಂಡಿದ್ದರು. ಕೊಹ್ಲಿಯ ಆಟೋಗ್ರಾಫ್‌ ವಿಚಾರ ಸಾಕಷ್ಟು ಸುದ್ದಿ ಮಾಡಿತ್ತು, ಸ್ವತಃ ಆಸ್ಟ್ರೇಲಿಯಾ ಪ್ರಧಾನಿ ಕೊಹ್ಲಿ ಆಟೋಗ್ರಾಫ್‌ ಪಡೆದಿದ್ದೇಕೆ ಎಂಬ ಬಗ್ಗೆ ಸೋಷಿಯಲ್‌ ಮೀಡಿಯಾದಲ್ಲಿ ಚರ್ಚೆಗಳು ನಡೆದಿದ್ದವು.

ಈಗ ಈ ವಿಚಾರದ ಬಗ್ಗೆ ಆಸ್ಟ್ರೇಲಿಯಾ ಪ್ರಧಾನಿ ಮಾಹಿತಿ ನೀಡಿದ್ದು ಕುತೂಹಲಕ್ಕೆ ತೆರೆ ಎಳೆದಿದ್ದಾರೆ. ಈ ಬಗ್ಗೆ ಸ್ಟಾರ್ಸ್ಪೋರ್ಟ್ಸ್ಜೊತೆ ಮಾತನಾಡಿರುವ ಆಲ್ಬನೀಸ್‌, ನನ್ನ ಖಾಸಗಿ ವೈದ್ಯರು ವಿರಾಟ್ ಕೊಹ್ಲಿಯ ದೊಡ್ಡ ಅಭಿಮಾನಿ. ನಾನು ಕೊಹ್ಲಿಯನ್ನು ಭೇಟಿಯಾಗುತ್ತೇನೆ ಎಂದು ಹೇಳಿದಾಗ ಅವರಿಗೆ ನಂಬಲು ಸಾಧ್ಯವಾಗಲಿಲ್ಲ. ಕೊಹ್ಲಿಯ ಅಟೋಗ್ರಾಫ್ಕೊಡಿಸಲು ಅವರು ನನ್ನಲ್ಲಿ ಹೇಳಿದ್ದರು. ಹಾಗಾಗಿ ನಾನು ಕೊಹ್ಲಿಯ ಆಟೋಗ್ರಾಫ್‌ ಪಡೆದು ವೈದ್ಯರಿಗೆ ನೀಡಿದೆ ಎಂದು ತಿಳಿಸಿದ್ದಾರೆ.