ದೇಶ
ದೇಶೀಯ ಕ್ರಿಕೆಟ್‌ಗೆ ಮರಳಿ.. ಕೊಹ್ಲಿ, ರೋಹಿತ್ ಶರ್ಮಾ ಟಾಂಗ್..?
ಭಾರತ ಕ್ರಿಕೆಟ್‌ನ ಮಾಜಿ ಕೋಚ್ ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಮೇಲೆ ಕೆಂಡಾಮಂಡಲರಾಗಿದ್ದಾರೆ..
ಭಾರತ ಕ್ರಿಕೆಟ್‌ನ ಮಾಜಿ ಕೋಚ್ ರವಿಶಾಸ್ತ್ರಿ ಅವರು ವಿರಾಟ್ ಕೊಹ್ಲಿ ಮತ್ತು ಕ್ಯಾಪ್ಟನ್ ರೋಹಿತ್ ಮೇಲೆ ಕೆಂಡಾಮಂಡಲರಾಗಿದ್ದಾರೆ.. ನಿರಂತರವಾಗಿ ಬ್ಯಾಟಿಂಗ್‌ನಲ್ಲಿ ವೈಫಲ್ಯ ಹಿನ್ನೆಲೆ ಇಬ್ಬರಿಗೂ ಚಾಟಿ ಬೀಸಿದ್ದಾರೆ.. ಇಬ್ಬರ ಬ್ಯಾಟಿಂಗ್ ಸಾಮರ್ಥ್ಯಕ್ಕೂ ಸವಾಲು ಎಸೆದಿದ್ದಾರೆ.. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಭರ್ಜರಿ ಫಾರ್ಮ್‌ನಲ್ಲಿ ಕಾಣಿಸಿಕೊಳ್ಳಲು ದೇಶೀಯ ಕ್ರಿಕೆಟ್‌ನಲ್ಲೂ ಆಡಲಿ ಅಂತಾ ಸಲಹೆ ನೀಡಿದ್ದಾರೆ.. ಕೆಂಪು-ಚೆಂಡಿನ ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ಕೌಶಲ್ಯಗಳನ್ನು ಚುರುಕುಗೊಳಿಸುವುದು ಮಾತ್ರವಲ್ಲದೇ ಯುವ ಪೀಳಿಗೆಯ ಕ್ರಿಕೆಟಿಗರಿಗೆ ಮಾರ್ಗದರ್ಶನ ನೀಡಲು ಅವಕಾಶ ನೀಡಿದಂತೆ ಆಗುತ್ತದೆ, ದೇಶೀಯ ಕ್ರಿಕೆಟ್‌ನಲ್ಲಿ ಆಡುವ ಬಗ್ಗೆ ನೀವೂ ಒಮ್ಮೆ ಯೋಚಿಸಿ ಅಂತಾ ರವಿಶಾಸ್ತ್ರೀ ಹೇಳಿದ್ದಾರೆ.. ಆಸ್ಟ್ರೈಲಿಯಾ - ಭಾರತ ನಡುವಿನ ಬಾರ್ಡರ್-ಗವಾಸ್ಕರ್ ಸರಣಿಯಲ್ಲಿ ಇಬ್ಬರೂ ಆಟಗಾರರೂ ಬ್ಯಾಟಿಂಗ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ್ದಾರೆ.. ನಿರಂತರ ವೈಫಲ್ಯ ಹಿನ್ನೆಲೆ ಭಾರತ ಕ್ರಿಕೆಟ್‌ನ ಮಾಜಿ ಕೋಚ್ ರವಿಶಾಸ್ತ್ರಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ..