ಮೈಸೂರು : ವರುಣಾ ಕ್ಷೇತ್ರಕ್ಕೆ 501 ಕೋಟಿ ಅನುದಾನ ವಿಚಾರಕ್ಕೆ ಸಂಬಂಧಿಸಿದಂತೆ ಎಂ.ಎಲ್.ಸಿ ವಿಶ್ವನಾಥ್ ಪ್ರತಿಕ್ರಿಯೆ ನೀಡಿದ್ದು, ಸಿಎಂ ಸಿದ್ದರಾಮಯ್ಯ ಅಭಿವೃದ್ದಿ ಮಾಡಲು ಬಂದಿದ್ರಾ ಅಥವಾ ನಾನು ಸತ್ಯವಂತ ಅಂತ ಜನರ ಬಳಿ ತೋರಿಸಲು ಬಂದಿದ್ರಾ? ಎಂದು ಪ್ರಶ್ನೆ ಮಾಡಿದ್ದು, ನಾನು ಸತ್ಯವಂತ ಅಂತ ಸ್ಪಷ್ಟೀಕರಣ ಕೊಡಲು ಮಾಡಿದ್ದ ವೇದಿಕೆ ಅದು, ಸಿದ್ದರಾಮಯ್ಯ ಅಹಿಂದಗೆ ಏನು ಮಾಡಿಲ್ಲ, ಸಿದ್ದರಾಮಯ್ಯ ಭ್ರಷ್ಟ ಅಂತ ಜನರಿಗೆ ಗೊತ್ತಾಗಿದೆ. ನಿಮ್ಮ ಸೊಸೆಗೆ ಪಬ್ ಮಾಡಿಕೊಟ್ಟಿದ್ದಾರೆ ಎಂದು ಸಿಎಂ ವಿರುದ್ದ ವಾಗ್ದಾಳಿ ನಡೆಸಿದ್ದಾರೆ.

ಈ ಬಗ್ಗೆ ಮೈಸೂರಿನಲ್ಲಿ ಮಾತನಾಡಿದ ಅವರು, ಬೈರತಿ ಸುರೇಶ್ ಒದ್ದು ಒಳಗಡೆ ಹಾಕಿ, ಸತ್ಯ ಹೊರ ಬರತ್ತೆ. ಇಂತಹ ವ್ಯಕ್ತಿಯನ್ನು ಮಂತ್ರಿ ಮಾಡಿದ್ದೀರಾ. ಒಳ್ಳೆಯ ಕೆಲಸಕ್ಕೆ ಕುರುಬರನ್ನು ಕರೆಯಿರಿ ಅಂತಿದ್ರು. ಈಗ ಅದಕ್ಕೆಲ್ಲ ಮಸಿ ಬಳಿದಿದ್ದೀರಾ ಸಿಎಂ ಸಿದ್ದರಾಮಯ್ಯ ವಿರುದ್ಧ ಎಂ.ಎಲ್.ಸಿ ವಿಶ್ವನಾಥ್ ಹರಿಹಾಯ್ದಿದ್ದಾರೆ.