ಕರ್ನಾಟಕ
ದರ್ಶನ್ ಬಿಡುಗಡೆ...ಬಳ್ಳಾರಿ ಮುಖ್ಯ ರಸ್ತೆ ಬಂದ್..!
ರೇಣುಕಾಸ್ವಾಮಿ ಕೊಲೆ ಆರೋಪಿ ದರ್ಶನ್ ಗೆ ಮಧ್ಯಂತರ ಜಾಮೀನು ಮಂಜೂರಾಗಿದ್ದು, ಬಳ್ಳಾರಿಯ ಮುಖ್ಯ ರಸ್ತೆಗಳು ಬಂದ್ ಆಗಿವೆ.
ದರ್ಶನ್ ಗೆ ಮಧ್ಯಂತರ ಜಾಮೀನು ಸಿಕ್ಕ ಹಿನ್ನೆಲೆ ಇಂದು, ಸಂಜೆ ವೇಳೆಗೆ ದರ್ಶನ್ ಬಳ್ಳಾರಿ ಜೈಲಿನಿಂದ ಬಿಡುಗಡೆಯಾಗಲಿದ್ದಾರೆ. ಇದರ ಸಲುವಾಗಿ ಬಳ್ಳಾರಿಯ ಮುಖ್ಯ ರಸ್ತೆ ಬಂದ್ ಆಗಿದೆ. ಅತಿಹೆಚ್ಚು ಅಭಿಮಾನಿಗಳು ಸೇರುವ ಸಾಧ್ಯತೆ ಇದ್ದು, ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಪ್ರಮುಖವಾಗಿ ದುರ್ಗಾದೇವಿ ಸರ್ಕಲ್ ಬಂದ್ ಆಗಲಿದ್ದು, ರಸ್ತೆ ಬದಿಯ ವ್ಯಾಪಾರಿಗಳು ಕಿಡಿ ಕಾರುತ್ತಿದ್ದಾರೆ.