ಕರ್ನಾಟಕ

ಆನ್ಲೈನ್‌ ಗೇಮಿಂಗ್‌ ನಲ್ಲಿ 3 ಕೋಟಿ ಕಳೆದುಕೊಂಡ ಬೆಂಗಳೂರಿನ ಟೆಕ್ಕಿ

ಆನ್‌ಲೈನ್‌ ಗೇಮಿಂಗ್‌ ನಲ್ಲಿ ಹಣ ಮಾಡುವ ಆಸೆಗೆ ಬಿದ್ದು ಬೆಂಗಳೂರಿನ ಟೆಕ್ಕಿಯೊಬ್ಬರು ಬರೋಬ್ಬರು 3 ಕೋಟಿ ರೂ. ಕಳೆದುಕೊಂಡಿದಾರೆ.

ಬೆಂಗಳೂರು: ಆನ್‌ಲೈನ್‌ ಗೇಮಿಂಗ್‌ ನಲ್ಲಿ ಹಣ ಮಾಡುವ ಆಸೆಗೆ ಬಿದ್ದು ಬೆಂಗಳೂರಿನ ಟೆಕ್ಕಿಯೊಬ್ಬರು ಬರೋಬ್ಬರು 3 ಕೋಟಿ ರೂ. ಕಳೆದುಕೊಂಡಿದಾರೆ.

ನಗರದ ಮೆಕಾಲೆ ಚರ್ಚ್ ರೋಡ್ ನಿವಾಸಿ ನಿಶಾಂತ್ ಶ್ರೀವಾತ್ಸವ್ ಮೋಸ ಹೋಗಿದ್ದು, ಆನ್ಲೈನ್ನಲ್ಲಿ ʼಪ್ಯಾಕೆಟ್ 52ʼ ಹೆಸರಿನ ಆ್ಯಪ್ನಲ್ಲಿ ಜೂಜಾಡಿ ಹಣ ಕಳೆದುಕೊಂಡಿದ್ದಾರೆ. ಸಂಬಂಧ ಕೇಂದ್ರ ವಿಭಾಗದ ಸೈಬರ್‌ ಕ್ರೈಮ್‌ (ಸಿಇಎನ್) ಠಾಣೆಗೆ ಆ್ಯಪ್ ಸಿಇಒ ಹಾಗೂ ಗೇಮ್ಸ್ ಕ್ರಾಫ್ಟ್ ಕಂಪನಿ ಸಿಇಒ ಸೇರಿ ಇತರರ ವಿರುದ್ದ ದೂರು ನೀಡಿದ್ದಾರೆ. ಟೆಕ್ಕಿ ನೀಡಿದ ದೂರಿನ ಮೇರೆಗೆ ಎಫ್ಐಆರ್ ದಾಖಲಾಗಿದೆ.

2023ರ ಏಪ್ರಿಲ್‌ ನಲ್ಲಿ 'ಪ್ಯಾಕೆಟ್ 52' ಆ್ಯಪ್ನಲ್ಲಿ ಖಾತೆ ತೆರೆದಿದ್ದೆ  ಆನಂತರ 2023ರ ಡಿಸೆಂಬರ್ ನಲ್ಲಿ ಬಹಳಷ್ಟು ವಂಚನೆ ಚಟುವಟಿಕೆಗಳ ಬಗ್ಗೆ ಆ್ಯಪ್ ಬಳಕೆದಾರರು ದೂರುಗಳನ್ನು ಹೇಳಲಾರಂಭಿಸಿದರು. ನಾನು ಕಡಿಮೆ ಮೊತ್ತದ ಆಟದಲ್ಲಿ ಗೆಲುವು ಕಂಡಾಗ ಆ್ಯಪ್ ನಿರ್ವಹಣೆಕಾರರು ಪ್ರತಿಕ್ರಿಯಿಸುತ್ತಿದ್ದರು. ಆದರೆ ದೊಡ್ಡ ಮೊತ್ತ ಗೆದ್ದರು ಯಾವುದೇ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಹಾಗೆ ಹಣದ ಬಗ್ಗೆ ಸಹ ಚಕಾರವೆತ್ತಿರಲಿಲ್ಲ. ಹೀಗಾಗಿ ತಮ್ಮ ಆ್ಯಪ್ನಲ್ಲಿ ಕೆಲ ವಂಚನೆಗಳು ನಡೆಯುತ್ತಿವೆ ಎಂದುಆ್ಯಪ್ನಿರ್ವಹಣೆಕಾರರು ಒಪ್ಪಿದ್ದರೂ ಕೂಡ ಕಳೆದುಕೊಂಡ ಹಣ ಮರಳಿಸಲಿಲ್ಲ. ಎಂದು ಟೆಕ್ಕಿ ತಮ್ಮ ದೂರಿನಲ್ಲಿ ತಿಳಿಸಿದ್ದಾರೆ.

ವಂಚನೆಯ ಚಟುವಟಿಕೆಗಳು ಆಟಗಾರರಿಂದ ನಡೆಯುತ್ತಿವೆಯೇ ಅಥವಾ ಆ್ಯಪ್ ಮೂಲದಲ್ಲಿಯೇ ಇವೆಯೇ ಎಂಬುದು ಗೊತ್ತಾಗಲಿಲ್ಲ. ಹೀಗಾಗಿ ಸಣ್ಣ ಪ್ರಮಾಣದ ಮೊತ್ತಗಳಲ್ಲಿ ಗೆಲುವು ಸಿಗುತ್ತಿದೆ. ಆದರೆ ದೊಡ್ಡ ಮೊತ್ತದ ಆಟಗಳಲ್ಲಿ ಕೆಲ ನಿರ್ದಿಷ್ಟ ವ್ಯಕ್ತಿಗಳೇ ವಿಜಯ ಸಾಧಿಸುತ್ತಿದ್ದರಿಂದ ಮೋಸದ ಶಂಕೆ ಮೂಡಿತು. ಇದುವರೆಗೆ ನಾನು 3 ಕೋಟಿ ರೂ. ಕಳೆದುಕೊಂಡಿದ್ದೇನೆ ಎಂದು ದೂರಿದ್ದಾರೆ.