ಕ್ರೀಡೆಗಳು

ಟಿ20 ಕ್ರಿಕೆಟ್‌ನಲ್ಲಿ ವಿಶ್ವದಾಖಲೆ ಬರೆದ ಬರೋಡಾ…

ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಬರೋಡಾ ತಂಡ 349 ರನ್‌ ಗಳಿಸುವ ಮೂಲಕ ಟಿ 20 ಕ್ರಿಕೆಟ್‌ ನಲ್ಲಿ ವಿಶ್ವದಾಖಲೆ ಬರೆದಿದೆ.

ಇಂದೋರ್‌: ಸಯ್ಯದ್‌ ಮುಷ್ತಾಕ್‌ ಅಲಿ ಟೂರ್ನಿಯಲ್ಲಿ ಬರೋಡಾ ತಂಡ 349 ರನ್‌ ಗಳಿಸುವ ಮೂಲಕ ಟಿ 20 ಕ್ರಿಕೆಟ್‌ ನಲ್ಲಿ ವಿಶ್ವದಾಖಲೆ ಬರೆದಿದೆ.

ಇಂದೋರ್‌ನ ಎಮ್‌ರಾಲ್ಡ್‌ ಹೈಸ್ಕೂಲ್‌ ಗ್ರೌಂಡ್‌ ನಲ್ಲಿ ಸಿಕ್ಕಿಂ ವಿರುದ್ಧ ನಡೆದ ಪಂದ್ಯದಲ್ಲಿ ಬರೋಡಾ ತಂಡ 20 ಓವರ್‌ ಗಳಲ್ಲಿ 5 ವಿಕೆಟ್‌ ನಷ್ಟಕ್ಕೆ 349 ರನ್‌ ಗಳಸಿದೆ. ಈ ಮೂಲಕ ಟಿ 20 ಕ್ರಿಕೆಟ್‌ ಇತಿಹಾಸದಲ್ಲಿ ಅತ್ಯಧಿಕ ರನ್‌ ಗಳಸಿದ ಸಾಧನೆಯನ್ನು ಬರೋಡಾ ಮಾಡಿದೆ. ಈ ಮೊದಲು ಅತ್ಯಧಿಕ ರನ್‌ ಗಳಿಸಿದ ದಾಖಲೆ ಜಿಂಬಾಬ್ವೆ ತಂಡದ ಹೆಸರಿನಲ್ಲಿತ್ತು. ಜಿಂಬಾಬ್ವೆ ತಂಡ ಇದೇ ವರ್ಷ ಗಾಂಬಿಯಾ ತಂಡದ ವಿರುದ್ಧ 20 ಓವರ್‌ ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 344 ರನ್‌ ಗಳಿಸಿತ್ತು.

ಬರೋಡಾ ತಂಡದ ಪರ ಭಾನು ಪನಿಯಾ 51 ಎಸೆತದಲ್ಲಿ ಅಜೇಯ 134 ರನ್‌ ಗಳಿಸಿದರು. ಉಳಿದಂತೆ ಅಭಿಮನ್ಯ ಸಿಂಗ್‌ 53, ಶಿವಲಿಕ್‌ ಶರ್ಮಾ 55, ವಿ ಸೋಲಂಕಿ 50 ಹಾಗೂ ಶಾಶ್ವತ್‌ ರಾವತ್‌ 43 ರನ್‌ ಗಳಿಸಿದರು. ಇನ್ನು 350 ರನ್‌ ಗುರಿ ಬೆನ್ನತ್ತಿದೆ ಸಿಕ್ಕಿಂ ತಂಡ 20 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 86 ರನ್‌ ಗಳಿಸಿತು. ಈ ಮೂಲಕ ಬರೋಡಾ ತಂಡ 263 ರನ್‌ ಅಂತರದ ಬೃಹತ್‌ ಜಯ ದಾಖಲಿಸಿತು.

ಇನ್ನು ಟಿ 20 ಕ್ರಿಕೆಟ್‌ ನಲ್ಲಿ ಇದುವರೆಗೆ ಕೇವಲ 3 ತಂಡಗಳು 300 ಕ್ಕೂ ಹೆಚ್ಚು ರನ್‌ ಗಳಿಸಿವೆ. ಬರೋಆ 349 ರನ್‌ನೊಂದಿಗೆ ಮೊದಲ ಸ್ಥಾನದಲ್ಲಿದ್ದರೆ ಜಿಂಬಾಬ್ವೆ 344 ರನ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ. ನೇಪಾಳ ತಂಡ 314 ರನ್‌ನೊಂದಿಗೆ 3 ನೇ ‍ಸ್ಥಾನದಲ್ಲಿದೆ. ಇನ್ನು ಟೀಂ ಇಂಡಿಯಾ ಸಹ ಇದೇ ವರ್ಷ ಬಾಂಗ್ಲಾದೇಶದ ವಿರುದ್ಧ 6 ವಿಕೆಟ್‌ ನಷ್ಟಕ್ಕೆ 297 ರನ್‌ ಗಳಿಸೋ ಮೂಲಕ ಹೆಚ್ಚು ರನ್‌ ಗಳಿಸದ ತಂಡಗಳ ಪಟ್ಟಿಯಲ್ಲಿ 4 ನೇ ಸ್ಥಾನದಲ್ಲಿದೆ. ಇದಕ್ಕೂ ಮೊದಲ ಭಾರತ ತಂಡ ದಕ್ಷಿಣ ಆಫ್ರಿಕಾ ವಿರುದ್ಧ 283 ರನ್‌ ಗಳಿಸಿ ದಾಖಲೆ ಬರೆದಿತ್ತು.