ಬೆಂಗಳೂರು - ಉದ್ಯಾನನಗರಿ ಬೆಂಗಳೂರಿನಲ್ಲಿ ಲಕ್ಷಾಂತರ ಕಟ್ಟಡಗಳು ತಲೆಯೆತ್ತಿದೆ. ಬಹುತೇಕ ಕಟ್ಟಡಗಳು ನಕ್ಷೆ ಮಂಜೂರಾತಿ ಅನುಮತಿ ಇಲ್ಲದೇ ತಲೆ ಎತ್ತಿದೆ. ಇದನ್ನ ಗಂಬೀರವಾಗಿ ಪರಿಗಣಿಸಿರುವ ಪಾಲಿಕೆ ಖುದ್ದು ಫೀಲ್ಡ್ಗಿಳಿದು ಕಟ್ಟಡಗಳ ತೆರವಿಗೆ ಕೈ ಹಾಕಿದೆ.
ದಾಸರಹಳ್ಳಿ ವಲಯದ ಚೊಕ್ಕಸಂದ್ರದಲ್ಲಿ ನಕ್ಷೆ ಮಂಜೂರಾತಿ ಪಡೆಯದೇ ಕಟ್ಟಡ ನಿರ್ಮಾಣವಾಗಿತು.
6 ಅಂತಸ್ತಿನ ಕಟ್ಟಡ ತೆರವಿಗೆ ಈಗಾಗಲೇ ಮಾಲೀಕರು ನೋಟಿಸ್ ನೀಡಿ ಎಚ್ಚರಿಕೆ ನೀಡಲಾಗಿತು . ಆದರೆ ಮಾಲೀಕರು ಸ್ಪಂದಿಸದ ಕಾರಣ ಖುದ್ದು ಬಿಬಿಎಂಪಿ ಅಗತ್ಯ ಸಲಕರಣೆ ಬಳಸಿಕೊಂಡು ಕಟ್ಟಡ ತೆರವಿಗೆ ಕೈ ಹಾಕಿದೆ.