ಹೊಸ ವರ್ಷದ ಸಂದರ್ಭದಲ್ಲಿ ಅನುಚಿತ ವರ್ತನೆ ತೋರುವವರಿಗೆ ಕಮಿಷನರ್ ಬಿ.ದಯಾನಂದ್ ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ. ಬೈಕ್‌ನಲ್ಲಿ ಪದೇ ಪದೇ ಓಡಾಟ, ಹೊಸ ವರ್ಷ ಮಾಡುವ ಭರದಲ್ಲಿ ಕೂಗಾಡುವುದು, ವಿಚಿತ್ರ ರೀತಿಯ ಮಾಸ್ಕ್ ಹಾಕುವುದು, ಮಕ್ಕಳಿಗೆ, ವೃದ್ದರಿಗೆ, ಹೆಣ್ಣುಮಕ್ಕಳಿಗೆ ತೊಂದರೆ ಮಾಡದಂತೆ ಎಚ್ಚರವಹಿಸಲಾಗುತ್ತೆ. ಓಲಾ, ಊಬರ್‌ಗಳ ಜೊತೆಯೂ ಮಾತನಾಡಲಾಗಿದೆ..ಅವರಿಗೆ ಒಂದಷ್ಟು ಸೂಚನೆಗಳನ್ನೂ ನೀಡಲಾಗಿದೆ. ಅದೇನಂದ್ರೆ ಎಂಜಿ ರೋಡ್, ಬ್ರಿಗೇಡ್ ರೋಡ್ ಬಳಿ ಅವರಿಗೆ ಪಿಕಪ್ ಮತ್ತು ಡ್ರಾಪ್ ಪಾಯಿಂಟ್ ಕೊಡಲಾಗಿದೆ.
ಅಲ್ಲದೇ ಜನರಿಗೆ ಅತಿಯಾದ ಹಣ ಬೇಡಿಕೆ ಇಡದಂತೆ ಸೂಚನೆ ನೀಡಲಾಗಿದೆ..ಜೊತೆಗೆ ಡ್ರಂಕ್ ಅಂಡ್ ಡ್ರೈವ್ ಮತ್ತು ವ್ಹೀಲಿಂಗ್ ಮಾಡುವರ ಮೇಲೂ ಹದ್ದಿನ ಕಣ್ಣಿಡಲಾಗಿದೆ. ಕುಡಿದು ವಾಹನ ಓಡಿಸುವವರ ಲೈಸೆನ್ಸ್ ಸೀಜ್ ಮಾಡಲಾಗುತ್ತೆ..ಹೊಸ ವರ್ಷ ದಿನ ಖಾಲಿ ರೋಡ್ ಅಂತಾ ವ್ಹೀಲಿಂಗ್ ಮಾಡೋರ ಸಂಖ್ಯೆ ಜಾಸ್ತಿ ಇರುತ್ತೆ..ಅಂತವರನ್ನ ಕೂಡಲೇ ಅರೆಸ್ಟ್ ಮಾಡಿ ಪ್ರಕರಣ ದಾಖಲು ಮಾಡಲಾಗುತ್ತೆ..ಈ ಬಗ್ಗೆ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ತಿಳಿಸಿದ್ದಾರೆ.