ಕರ್ನಾಟಕ

ಕಿತ್ತೂರು ಉತ್ಸವ ಹಿನ್ನೆಲೆ 3 ದಿನಗಳ ಕಾಲ ಶಾಲಾ-ಕಾಲೇಜುಗಳಿಗೆ ರಜೆ..!

ರಾಣಿ ಚೆನ್ನಮ್ಮ 200ನೇ ವಿಜಯೋತ್ಸವ ಅಂಗವಾಗಿ ಕಿತ್ತೂರಿನಲ್ಲಿ, ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ರಜೆ ಘೋಷಣೆ ಮಾಡಿದ್ದಾರೆ.

ಬೆಳಗಾವಿ: ಇಂದಿನಿಂದ ( ಅಕ್ಟೋಬರ್ 23 ) ಮೂರು ದಿನಗಳ ಕಾಲ ಕಿತ್ತೂರು ಉತ್ಸವ ಹಿನ್ನೆಲೆ, ಕಿತ್ತೂರು ಮತ್ತು ಬೈಲಹೊಂಗಲ ತಾಲೂಕಿನ ಶೈಕ್ಷಣಿಕ ವಲಯದ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದೆ. 

ರಾಣಿ ಚೆನ್ನಮ್ಮ 200ನೇ ವಿಜಯೋತ್ಸವ ಅಂಗವಾಗಿ ಕಿತ್ತೂರಿನಲ್ಲಿ, ಬೆಳಗಾವಿ ಡಿಸಿ ಮೊಹಮ್ಮದ್ ರೋಷನ್ ರಜೆ ಘೋಷಣೆ ಮಾಡಿದ್ದಾರೆ. ಸರ್ಕಾರಿ, ಅನುದಾನಿತ, ಅನುದಾನರಹಿತ ಶಾಲಾ ಕಾಲೇಜುಗಳಿಗೆ ರಜೆ ಘೋಷಣೆಯಾಗಿದ್ದು, ಮಕ್ಕಳು ಉತ್ಸವದಲ್ಲಿ ಪಾಲ್ಗೊಳ್ಳಲಿ ಎಂದು ಹೇಳಿದ್ದಾರೆ. ಅಗಸ್ಟ್ 23 ರಿಂದ 25 ರವರೆಗೆ ಮೂರು ದಿನ ರಜೆ ನೀಡಿ ಜಿಲ್ಲಾಧಿಕಾರಿ ಮೊಹಮ್ಮದ್ ರೋಷನ್ ಆದೇಶ ಹೊರಡಿಸಿದ್ದಾರೆ.