ಬೆಳಗಾವಿ : ಗೃಹಲಕ್ಷ್ಮಿ ಹಣವನ್ನ ಕೂಡಿಟ್ಟು ಮಹಿಳೆಯೊಬ್ಬರು ಎತ್ತೊಂದನ್ನ ಖರೀದಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ತವಗ ಗ್ರಾಮದ ನಿವಾಸಿ ಬಸವ್ವ ಬುಳ್ಳಿ ಎಂಬ ರೈತ ಮಹಿಳೆ ಗ್ಯಾರಂಟಿ ಯೋಜನೆಯ ಗೃಹಲಕ್ಷ್ಮಿ ಹಣದಿಂದ ಎತ್ತನ್ನ ಖರೀದಿಸಿದ್ದಾಳೆ.
ಪ್ರತಿ ತಿಂಗಳ 2 ಸಾವಿರ ಹಣವನ್ನ ಕೂಡಿಟ್ಟು, 22 ಸಾವಿರ ಹಣದಿಂದ ಬಸವ್ವ ಒಂದು ಎತ್ತನ್ನ ಕೊಂಡಿದ್ದಾಳೆ. ಈ ಹಿಂದೆ ಒಂದೇ ಎತ್ತು ಮನೆಯಲ್ಲಿ ಇತ್ತು. ಹಾಗಾಗಿ ಅದರಿಂದ ಬೇಸಾಯ ಮಾಡಲು ಸಾದ್ಯವಾಗುತ್ತಿರಲಿಲ್ಲ. ಹಾಗಾಗಿ ಗೃಹಲಕ್ಷಿ ಹಣವನ್ನ ಕೂಡಿಟ್ಟು ಇನ್ನೊಂದು ಎತ್ತನ್ನ ಖರೀದಿಸಿದ್ದು, ಈಗ ಎರಡು ಎತ್ತುಗಳಿಂದ ಬಸವ್ವ ಮತ್ತು ಶಿವಪ್ಪ ದಂಪತಿ ಬೇಸಾಯ ಆರಂಭಿಸಿದ್ದಾರೆ.
ಮಕ್ಕಳಿಲ್ಲದ ದಂಪತಿಗೆ ಗ್ಯಾರಂಟಿ ಹಣ ಜೀವನಕ್ಕೆ ಆಧಾರವಾಗಿದ್ದು, ಈಗ ಇದೇ ಹಣದಿಂದ ಎತ್ತನ್ನ ಕೂಡ ಖರೀದಿಸಿ ಬದುಕು ಕಟ್ಟಿಕೊಂಡಿದ್ದಾರೆ.
ಇನ್ನೂ ಬಸವ್ವ ಮನೆಗೆ ಗೋಕಾಕ್ ತಾಲೂಕು ಗ್ಯಾರಂಟಿ ಅನುಷ್ಠಾನ ಅಧ್ಯಕ್ಷ ಮಹಾಂತೇಶ್ ಕಡಾಡಿ ಭೇಟಿ ನೀಡಿದ್ದು, ಬಸವ್ವ ಕುಟುಂಕ್ಕೆ ತಮ್ಮ ಕೈಲಾದಷ್ಟು ಆರ್ಥಿಕ ಸಹಾಯವನ್ನ ಮಾಡಿದ್ದಾರೆ.