ವೈರಲ್

ಬೆಳಗಾವಿ! ಮೂರ್ತಿ ವಿಸರ್ಜನೆ ವೇಳೆ ಎರಡು ಗುಂಪುಗಳ ನಡುವೆ ಗಲಾಟೆ- ಪೊಲೀಸರಿಂದ ಲಾಠಿ ಚಾರ್ಜ್

ಕಳೆದ ರಾತ್ರಿ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗಲಾಟೆಯಲ್ಲಿ ಮೂವರಿಗೆ ಗಾಯ 2 ಬೈಕ್ ಹಾಗೂ ಕಾರು ಜಖಂ ಆಗಿವೆ. ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮೂರ್ತಿ ವಿಸರ್ಜನೆ ಮುಗಿಸಿಕೊಂಡು ಬರುವಾಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಬೆಳಗಾವಿ : ದುರ್ಗಾದೇವಿ ಮೂರ್ತಿ ವಿಸರ್ಜನೆ ಬಳಿಕ ಎರಡು ಕೋಮಿನ ಮಧ್ಯೆ ಗಲಾಟೆ ನಡೆದಿದ್ದು, ಈ ಘಟನೆ ಕಳೆದ ರಾತ್ರಿ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಗಲಾಟೆಯಲ್ಲಿ ಮೂವರಿಗೆ ಗಾಯ 2 ಬೈಕ್ ಹಾಗೂ ಕಾರು ಜಖಂ ಆಗಿವೆ.
ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಸೊಲ್ಲಾಪುರ ಗ್ರಾಮದಲ್ಲಿ ನಡೆದಿದೆ. ಮೂರ್ತಿ ವಿಸರ್ಜನೆ ಮುಗಿಸಿಕೊಂಡು ಬರುವಾಗ ಇಬ್ಬರ ನಡುವೆ ಗಲಾಟೆ ಶುರುವಾಗಿದೆ.

ಅಮಿತ ನಾಯಿಕ ಹಾಗೂ ಪೈರೋಜ್ ಎಂಬುವವರ ಮದ್ಯೆ ಗಲಾಟೆ ಶುರುವಾಗಿದ್ದು,  ಬಳಿಕ ಮಸೀದಿಯ ಮೈಕ್ ನಲ್ಲಿ ಮುಸ್ಲಿಮರ ಮೇಲೆ ಹಲ್ಲೆಯಾಗಿದೆ ಎಲ್ಲರೂ ಬನ್ನಿ ಎಂದು ಕರೆ ನೀಡಿದ್ದಾರೆ. ಎರಡು ಗುಂಪಿನ ಜನ ಸೇರುತ್ತಿದ್ದಂತೆ ಪೊಲೀಸರಿಂದ ಲಾಠಿ ಚಾರ್ಜ್ ಮಾಡಿದ್ದಾರೆ. ಲಾಠಿ ಚಾರ್ಜ್ ನಡೆಸಿ ಪೊಲೀಸರು ಜನರನ್ನ ಚದುರಿಸಿದ್ದಾರೆ. ಗ್ರಾಮದಲ್ಲಿ ಬಿಗುವಿನ 2 ಕೆ.ಎಸ್.ಆರ್.ಪಿ ಹೆಚ್ಚಿನ ಪೊಲೀಸರ ನಿಯೋಜನೆ ಮಾಡಿದ್ದಾರೆ. ಸಂಕೇಶ್ವರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.