ಬೆಳಗಾವಿ : ನಗರದ ದರ್ಬಾರ್ ಗಲ್ಲಿಯಲ್ಲಿ ಪ್ಯಾಲೆಸ್ತೀನ್ ಪ್ರೇಮ ಇನ್ನೂ ಮುಂದುವರೆದಿದ್ದು, ಈ ವರೆಗೂ ಧ್ವಜ ಹಾರಾಟಕ್ಕೆ ಪ್ಯಾಲೆಸ್ತೀನ್ ಬೆಂಬಲ ಸೀಮಿತವಾಗಿದೆ. ಕಿಡಗೇಡಿಗಳು ಈಗ ಪ್ಯಾಲೆಸ್ತೀನ್ ಧ್ವಜದ ಶಾಮೀಯಾನ ಹಾಕಿದ್ದಾರೆ. ಪೊಲೀಸರ ವಾರ್ನ್ ಗೂ ಬೆಳಗಾವಿಯಲ್ಲಿ ಡೋಂಟ್ ಕೇರ್ ಅಂತಿದ್ದಾರೆ. ಈ ಘಟನೆ ಬೆಳಗಾವಿ ನಗರದ ದರ್ಬಾರ್ ಗಲ್ಲಿಯಲ್ಲಿ ನಡೆದಿದೆ.

ಹೌದು, ನಗರದ ದರ್ಬಾರ್ ಗಲ್ಲಿಯಲ್ಲಿ ಕಿಡಗೇಡಿಗಳು ಎರಡನೂರು ಮೀಟರ್ ರಸ್ತೆಯುದ್ದಕ್ಕೂ ಪ್ಯಾಲೆಸ್ತೀನ್ ಧ್ವಜದ ಶಾಮೀಯಾನ ಕಟ್ಟಿದ್ದಾರೆ. ನಾಳೆ ನಡೆಯಲಿರುವ ಈದ್ ಮಿಲಾದ್ ಮೆರವಣಿಗೆಗೆ ಸಿದ್ಧತೆ ನಡೆಸಿದ್ದು, ಇಂದಿನಿಂದಲೇ ಮುಸ್ಲಿಂ ಸಮುದಾಯದ ಯುವಕರು ಬೀದಿಗಳಲ್ಲಿ ಅಲಂಕಾರ ಮಾಡುತ್ತಿದ್ಧಾರೆ. ಕಿಡಗೇಡಿಗಳು ರಾತ್ರೋರಾತ್ರಿ ಪ್ಯಾಲೆಸ್ತೀನ್ ಧ್ವಜವನ್ನೇ ದೊಡ್ಡ ಪ್ರಮಾಣದಲ್ಲಿ ಕಟ್ಟಿದ್ದು, ಸ್ಥಳದಲ್ಲೇ ಇದ್ದ ಪಾಲಿಕೆ ಕಾಂಗ್ರೆಸ್ ವಿರೋಧ ಪಕ್ಷದ ನಾಯಕ ಮುಜಾಮಿಲ್ ಡೋಣಿ ಕಾರು, ಮಾಧ್ಯಮದವರು ಬರ್ತಿದ್ದಂತೆ ಮುಜಾಮಿಲ್ ಡೋಣಿ ಅಲ್ಲಿಂದ ಕಾಲ್ಲಿತ್ತಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಈ ಘಟನೆದಿದೆ.
