ಕರ್ನಾಟಕ

ಭಕ್ತಿ ವೈಯಕ್ತಿಕ ವಿಷಯ.. ಭಕ್ತಿಯಿದ್ದವರು ಮಹಾಕುಂಭಕ್ಕೆ ಹೋಗ್ತಾರೆ : ಸತೀಶ್‌ ಜಾರಕಿಹೊಳಿ

ಭಕ್ತಿ ವೈಯಕ್ತಿಕ ವಿಷಯ ಮತ್ತು ಭಕ್ತಿಯಿದ್ದವರು ಮಹಾಕುಂಭಕ್ಕೆ ಹೋಗುತ್ತಾರೆ. ಮಂಗಳೂರಿಂದಲೂ ರೈಲು ಹೊರಟಿದೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಕುಂಭಮೇಳಕ್ಕೆ ಹೊರಟಿದ್ದಾರೆ. ಜನದಟ್ಟಣೆ ಕಡಿಮೆಯಾಗಲಿ, ಆಮೇಲೆ ನಾನು ಹೋಗಿ ಬರುತ್ತೇನೆ.

ಉಡುಪಿ: ಕುಂಭಮೇಳದ ಬಗ್ಗೆ ಮಲ್ಲಿಕಾರ್ಜುನ್ ಖರ್ಗೆ ಹೇಳಿಕೆ ಹಾಗೂ ಡಿಕೆಶಿ ಪುಣ್ಯಸ್ನಾನ ಮಾಡಿರೋದು ಅದು ಅವರ ವೈಯಕ್ತಿಕ ಅಭಿಪ್ರಾಯ ಎಂದು ಸತೀಶ್‌ ಜಾರಕಿಹೊಳಿ ಹೇಳಿದ್ದಾರೆ. ಉಡುಪಿಯಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಖರ್ಗೆಯವರು ಅವರ ಅಭಿಪ್ರಾಯ ಹೇಳಿದ ತಕ್ಷಣ ಹೋಗುವವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಕುಂಭಮೇಳಕ್ಕೆ ಹೋಗುವವರು ಮುಕ್ತವಾಗಿದ್ದಾರೆ ಎಲ್ಲರೂ ಹೋಗುತ್ತಿದ್ದಾರೆ. ಇದರಲ್ಲಿ ಏನೂ ಗೊಂದಲ ಆಗುವುದಿಲ್ಲ ಎಂದರು. 

ಭಕ್ತಿ ವೈಯಕ್ತಿಕ ವಿಷಯ ಮತ್ತು ಭಕ್ತಿಯಿದ್ದವರು ಮಹಾಕುಂಭಕ್ಕೆ ಹೋಗುತ್ತಾರೆ.  ಮಂಗಳೂರಿಂದಲೂ ರೈಲು ಹೊರಟಿದೆ. ನಮ್ಮ ಕಾಂಗ್ರೆಸ್ ಕಾರ್ಯಕರ್ತರು ಕುಂಭಮೇಳಕ್ಕೆ ಹೊರಟಿದ್ದಾರೆ. ಜನದಟ್ಟಣೆ ಕಡಿಮೆಯಾಗಲಿ, ಆಮೇಲೆ ನಾನು ಹೋಗಿ ಬರುತ್ತೇನೆ. ಈಗ ಬಹಳ ಜನದಟ್ಟಣೆ ಇದೆ. ಮಂಗಳೂರಿನಿಂದ ಕುಂಭಮೇಳಕ್ಕೆ ಹೊರಟವರಲ್ಲಿ ಶೇ.50 ಕಾಂಗ್ರೆಸ್‌ನವರೇ ಇದ್ದಾರೆ. ಅದೇನು ಒಂದೇ ಪಕ್ಷಕ್ಕೆ ಸೀಮಿತವಾದ ಆಚರಣೆ ಅಲ್ಲ. ಯಾರ ಭಕ್ತಿಗೂ ನಾವು ಅಡ್ಡಿಪಡಿಸಲು ಹೋಗಲ್ಲ, ಇದು ಜನರ ಭಕ್ತಿ-ಪ್ರೀತಿ ವಿಶ್ವಾಸಕ್ಕೆ ಸಂಬಂಧಪಟ್ಟ ವಿಷಯ ಎಂದು ತಿಳಿಸಿದರು.