ರೇಣುಕಾಸ್ವಾಮಿ
ಕೊಲೆ ಕೇಸ್ನಲ್ಲಿ ವಿಚಾರಣಾಧೀನ ಕೈದಿ, ದರ್ಶನ್ ಅವರನ್ನು ಇರಿಸಿರೋ ಬಳ್ಳಾರಿ ಕೇಂದ್ರ ಕಾರಾಗೃಹದ
ಹೈ ಸೆಕ್ಯೂರಿಟಿ ಸೆಲ್ಗೆ ಸ್ಥಿರ ದೂರವಾಣಿ ವ್ಯವಸ್ಥೆಯನ್ನ ಕಲ್ಪಿಸಲಾಗಿದೆ.
ಬೆಂಗಳೂರಿನ ಪರಪ್ಪನ
ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಳ್ಳಾರಿಯ ಕಾರಾಗೃಹಕ್ಕೆ ಸ್ಥಳಾಂತರಗೊಂಡ ಬಳಿಕ ಅವರು ಪಾಶ್ಚಿಮಾತ್ಯ
ಕಮೋಡ್ ಮಾದರಿಯ ಕುರ್ಚಿ ಸೌಲಭ್ಯ ಈಗಾಗ್ಲೆ ಪಡೆದುಕೊಂಡಿದ್ದಾರೆ. ಇದೀಗ ತಾವಿರುವ ಸೆಲ್ನಿಂದಲೇ
ನಿಗದಿಪಡಿಸಿದ ಸಂಖ್ಯೆಗಳಿಗೆ ಕೆಲವು ನಿಮಿಷ ಫೋನ್ ಮಾಡುವ ಅವಕಾಶ ದೊರಕಿದೆ. ಕೆರೆ ಮಾಡುವ ಬಗ್ಗೆ
ಅವರ ಜೈಲಿನ ಅಧಿಕಾರಿಗಳಿಗೆ ಮುಂಚಿತವಾಗಿ ಮಾಹಿತಿ ನೀಡಬೇಕಿದೆ.
ದರ್ಶನ್ ಇರೋ
ಸೆಲ್ಗೆ ಫೋನ್ ಬಳಕೆ ಯಾಕೆ..?
ಈ ಹಿಂದೆ ಅವರು
ಕಾರಾಗೃಹ ಸಭಾಂಗಣಕ್ಕೆ ಹೊಂದಿಕೊಂಡಂತೆ ಸಾಮಾನ್ಯ ಕೈದಿಗಳು ಇರುವ ಬ್ಯಾರಕ್ ಪಕ್ಕದ ಫೋನ್ ಬಳಸಬೇಕಿತ್ತು.
ಕೈದಿಗಳನ್ನು ಭೇಟಿಯಾಗಲು ಬರುವವರ ಸಂಖ್ಯೆ ಇತ್ತೀಚೆಗೆ ಹೆಚ್ಚಿರುವ ಹಿನ್ನಲೆ ದರ್ಶನ್ ಇರುವ ಸೆಲ್ಗೆ
ಸ್ಥಿರ ದೂರವಾಣಿ ಅಳವಡಿಸಲಾಗಿದೆ.
ಪತ್ನಿ ಜೊತೆ
ಕೇಸ್ ಬಗ್ಗೆ ಮಾತುಕತೆ..
ಕೊಲೆ ಪ್ರಕರಣಕ್ಕೆ
ಸಂಬಂಧಿಸಿದಂತೆ ಜಾಮೀನು ಅರ್ಜಿ ಕುರಿತು ತಮ್ಮ ವಕೀಲರ ಜತೆ ಚರ್ಚಿಸಲು, ಕುಟುಂಬದ ಸದಸ್ಯರ ಜತೆ ಮಾತನಾಡಲು
ದರ್ಶನ್ಗೆ ಅನುಕೂಲವಾಗಿದೆ. ಮಂಗಳವಾರ ಪತ್ನಿ ವಿಜಯಲಕ್ಷ್ಮಿ ಜತೆ ಸೆಲ್ನಿಂದಲೇ ಮಾತನಾಡಿದ ದರ್ಶನ್.
ಮುಂದಿನ ಕಾನೂನು ಹೋರಾಟ ಕುರಿತು ಚರ್ಚಿಸಿದ್ದಾರೆ ಎನ್ನಲಾಗಿದೆ. ಸಮಯ ಕಳೆಯಲು ಕಷ್ಟವಾಗುತ್ತಿದ್ದು,
ತಮ್ಮ ಸೆಲ್ಗೆ ಬೇಗನೇ ಟಿವಿ ಅಳವಡಿಸುವಂತೆ ಜೈಲಿನ ಅಧಿಕಾರಿಗಳಿಗೆ ಅವರು ಮನವಿ ಮಾಡಿದ್ದಾರೆ, ಶುಕ್ರವಾರ
ಗೌರಿ ಗಣೇಶ ಹಬ್ಬದ ನಿಮಿತ್ತ ಮಾಂಸದ ಊಟದ ಬದಲಿಗೆ ಸಿಹಿ ಊಟ ನೀಡಿದ್ದರಿಂದ ಮಂಗಳವಾರ ಎಲ್ಲ ಕೈದಿಗಳಿಗೆ
ಮಾಂಸದ ಊಟ ವಿತರಿಸಲಾಗಿದೆ.