ಬಳ್ಳಾರಿಯಲ್ಲಿ ನಡೆದ ಐವರು ಬಾಣಂತಿಯ ಸಾವು ಪ್ರಕರಣ ದಾಜ್ಯದೆಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ. ಇದರ ನಡುವೆ ವಿರೋಧ ಪಕ್ಷಗಳು ಕಿಡಿ ಕಾರುತ್ತಿದ್ದು, ಪ್ರಕರಣ ಸಂಬಂಧ ಲೋಕಾಯುಕ್ತ ತನಿಖೆ ಮಾಡಬೇಕು, ಹಾಗೂ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಿಯೋಗ ಒತ್ತಾಯ ಮಾಡುತ್ತಿದೆ.
ಅಲ್ಲದೇ ಘಟನೆ ಸಂಬಂಧ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಬಿಜೆಪಿ ನಿಯೋಗ ಆಗ್ರಹ ಮಾಡುತ್ತಿದೆ. ಅಲ್ಲದೇ ಬಾಣಂತಿಯರ ಸಾವಿನ ಹಿಂದೆ ಕಳಪೆ ಗುಣಮಟ್ಟದ ಔಷಧಿ ಬಳಸಿರುವ ಶಂಕೆ ವ್ಯಕ್ತವಾಗಿದೆ. ಹೀಗಾಗಿ ಇದರಲ್ಲಿ ಭಾಗಿಯಾದವರ ವಿರುದ್ಧ ಕ್ರಮ ಆಗಬೇಕು, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು ಎಂದು ಬಿಜೆಪಿ ನಿಯೋಗ ಒತ್ತಾಯ ಮಾಡಿದೆ.