ವೈರಲ್

ಬೆಳ್ತಂಗಡಿ! ಮಕ್ಕಳಿಲ್ಲ ಅಂತ ನೇಣಿಗೆ ಕೊರಳೊಡ್ಡಿದ ದಂಪತಿಗಳು

ಕಾಶಿಪಟ್ನದ ಉರ್ದುಗುಡ್ಡೆ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಹಾಗೂ ಪತ್ನಿ ಬೇಬಿ (46) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು. ನಿನ್ನೆ ತಡರಾತ್ರಿ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಗಳೂರು : ದಂಪತಿಗಳಿಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಕಾಶಿಪಟ್ನ ಬಳಿ ನಡೆದಿದೆ ಎಂದು ತಿಳಿದು ಬಂದಿದ.

Bengaluru: ಪತಿ, ಮೊದಲ ಪತ್ನಿಯಿಂದ ಹಲ್ಲೆ ...

ಹೌದು, ಕಾಶಿಪಟ್ನದ ಉರ್ದುಗುಡ್ಡೆ ನಿವಾಸಿಗಳಾದ ನೊಣಯ್ಯ ಪೂಜಾರಿ (63) ಹಾಗೂ ಪತ್ನಿ ಬೇಬಿ (46) ಆತ್ಮಹತ್ಯೆ ಮಾಡಿಕೊಂಡ ದಂಪತಿಗಳು. ನಿನ್ನೆ ತಡರಾತ್ರಿ ಮನೆ ಸಮೀಪದ ಗುಡ್ಡದಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೋಣಯ್ಯ ಪೂಜಾರಿಯ ಮೊದಲ ಪತ್ನಿ ಹತ್ತು ವರ್ಷದ ಹಿಂದೆ ಸಾವನ್ನಪ್ಪಿದ್ದರು. ಬಳಿಕ ಬೇಬಿ ಅವರನ್ನ ಎರಡನೇ ಮದುವೆಯಾಗಿದ್ದರು. ಕಳೆದ ಐದು ವರ್ಷದಿಂದ ನೊಣಯ್ಯ ಪೂಜಾರಿ ತಲೆನೋವಿನಿಂದ ಬಳಲುತ್ತಿದ್ದು ಇದರಿಂದ ನೊಂದಿದ್ದರು.ಇತ್ತ ಪತ್ನಿ ಬೇಬಿಯೂ ಮಕ್ಕಳಾಗಿರಲಿಲ್ಲ ಅನ್ನೋ ಕೊರಗಿನಲ್ಲಿದ್ದರು. ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಸದ್ಯ ವೇಣೂರು ಪೊಲೀಸ್ ಠಾಣೆಯಲ್ಲಿ ಆತ್ಮಹತ್ಯೆ ಪ್ರಕರಣ ದಾಖಲಾಗಿದೆ.