
ಬಾಳೆಹಣ್ಣು
ಬಾಳೆಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ B6 ಮತ್ತು ವಿಟಮಿನ್ B12 ಅಂಶವು ಹೆಚ್ಚಾಗಿರುತ್ತದೆ. ಇದು ನಮ್ಮ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಜೊತೆಗೆ ಬಾಳೆಹಣ್ಣಿನ ಸಿಪ್ಪೆಯನ್ನು ಬಳಸುವುದರಿಂದ ಮುಖದ ಮೇಲಿನ ಕಲೆಗಳು ಹೋಗುತ್ತವೆ. ಹಳದಿ ಬಣ್ಣದ ಹಲ್ಲುಗಳನ್ನು ಹೊಳೆಯುವಂತೆ ಮಾಡಲು ಬಾಳೆಹಣ್ಣಿನ ಸಿಪ್ಪೆ ಸಹಾಯಕಾರಿ. ಜೊತೆಗೆ ದೇಹದ ಬಾಗದಲ್ಲಿ ನೋವು ಕಾಣಿಸಿಕೊಂಡರೆ ಬಾಳೆಹಣ್ಣಿನ ಸಿಪ್ಪೆಯಲ್ಲಿ ಮಸಾಜ್ ಮಾಡಿಕೊಂಡರೆ ನೋವು ಕಡಿಮೆಯಾಗುತ್ತದೆ.

ಕಿವಿ ಹಣ್ಣು
ಕಿವಿ ಹಣ್ಣನ್ನು ತಿನ್ನುವುದರಿಂದ ನಮ್ಮ ದೇಹದಲ್ಲಿ ಪ್ಲೇಟ್ಲೆಟ್ ಗಳ ಸಂಖ್ಯೆ ಜಾಸ್ತಿಯಾಗುತ್ತದೆ. ಜೊತೆಗೆ ಸಿಪ್ಪೆಯಲ್ಲಿ ಫೈಬರ್ , ಕಾರ್ಬೋಹೈಡ್ರೇಟ್ ಮತ್ತು ಪೋಷಕಾಂಶಗಳು ಹೆಚ್ಚಾಗಿದೆ. ಅದರಲ್ಲೂ ಹೃದಯ ಮತ್ತು ಶ್ವಾಸಕೋಶಕ್ಕೆ ಸಂಬಂಧಪಟ್ಟ ಕಾಯಿಲೆಗಳನ್ನು ದೂರವಿರಿಸಲು ಸಹಾಯ ಮಾಡುತ್ತದೆ.

ಕಲ್ಲಂಗಡಿ ಹಣ್ಣು
ಕಲ್ಲಂಗಡಿ ಹಣ್ಣಿನ ಸಿಪ್ಪೆ ಹೃದಯದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದರಲ್ಲಿ ಸಾಕಷ್ಟು ಖನಿಜಾಂಶಗಳು ಇರುತ್ತದೆ. ಆದ್ದರಿಂದ ಇದನ್ನೂ ಸೇವಿಸುವುದು ತುಂಬಾ ಉತ್ತಮ.

ಕಿತ್ತಳೆ ಹಣ್ಣು
ಕಿತ್ತಳೆ ಹಣ್ಣಿನ ಸಿಪ್ಪೆಯಲ್ಲಿ ವಿಟಮಿನ್ ಸಿ ಅಂಶವು ಹೇರಳವಾಗಿರುತ್ತದೆ. ಜೊತೆಗೆ ಅಗತ್ಯ ಪೋಷಕಾಂಶಗಳು, ಫೈಬರ್ ಅಂಶ ಕೂಡಾ ಹೆಚ್ಚಾಗಿರುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅದರಲ್ಲೂ ಚರ್ಮಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ. ಕಿತ್ತಳೆ ಹಣ್ಣಿನ ಸಿಪ್ಪೆಯ ಪುಡಿಯನ್ನ ವಾರಕ್ಕೆ ಒಂದು ಬಾರಿ ಮುಖಕ್ಕೆ ಹಚ್ಚುವುದರಿಂದ ಮುಖದ ಕಾಂತಿ ಹೆಚ್ಚಿಸುತ್ತದೆ. ಜೊತೆಗೆ ಕಿತ್ತಳೆ ಹಣ್ಣಿನ ಪುಡಿಯನ್ನು ಒಂದೊಂದು ಚಮಚ ವಾರಕ್ಕೆ ಎರಡು ಮೂರು ಬಾರಿ ಸೇವಿಸುವುದರಿಂದ ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು.

ಮಾವಿನ ಹಣ್ಣು
ಮಾವಿನ ಹಣ್ಣಿನಲ್ಲಿ ಏನೆಲ್ಲಾ ಪ್ರಯೋಜನಗಳಿವೆಯೋ ಅದಕ್ಕಿಂತ ಜಾಸ್ತಿ ಈ ಹಣ್ಣಿನ ಸಿಪ್ಪೆಯಲ್ಲಿ ಉಪಯೋಗಗಳಿವೆ. ಈ ಹಣ್ಣಿನ ಸಿಪ್ಪೆಯಲ್ಲಿ ಅಗತ್ಯ ಪೋಷಕಾಂಶಗಳು, ಫೈಬರ್ ಅಂಶ, ಇರುತ್ತದೆ ಅದರಲ್ಲೂ ಮುಖ್ಯವಾಗಿ ಕಾರ್ಬೋ ಹೈಡ್ರೆಟ್ ಅಂಶ ಜಾಸ್ತಿ ಇರುವುದರಿಂದ ಜೀರ್ಣಕ್ರಿಯೆಗೆ ತುಂಬಾ ಉತ್ತಮ. ಅಲ್ಲದೆ ಹೃದಯದ ಆರೋಗ್ಯವನ್ನೂ ಕಾಪಾಡುವಲ್ಲಿ ಸಹಾಯಕಾರಿ.

ದಾಳಿಂಬೆ ಹಣ್ಣು
ರುಚಿಯಲ್ಲಿ ಸ್ವಲ್ಪ ಕಹಿ ಎನಿಸುವ ಇದರ ಸಿಪ್ಪೆಯು ಚರ್ಮಕ್ಕೆ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಅದರಂತೆ ಹೃದಯದ ಆರೋಗ್ಯಕ್ಕೂ ಇದು ತುಂಬಾ ಉತ್ತವಾದಂತದ್ದಾಗಿದೆ. ಸಾಕಷ್ಟು ಹೃದಕಯಕ್ಕೆ ಸಂಬಂಧ ಪಟ್ಟ ಕಾಯಿಲೆಗಳನ್ನೂ ಕೂಡಾ ಇದು ದೂರ ಮಾಡುತ್ತದೆ. ದಾಳಿಂಬೆ ಹಣ್ಣಿನ ಸಿಪ್ಪೆಯನ್ನು ಚೆನ್ನಾಗಿ ರುಬ್ಬಿ ಒಂದು ಲೋಟ ನೀರಿನೊಂದಿಗೆ ಅದನ್ನು ಬೆರೆಸಿ ಅದನ್ನು ಸೇವಿಸಬಹುದು. ಕುಡಿಯಲು ಸ್ವಲ್ಪ ಕಷ್ಟ ಎನಿಸಬಹುದು ಆದರೆ ಇದನ್ನು ಕುಡಿಯುವುದರಿಂದ ಹೃದಯದ ಆರೋಗ್ಯದ ಜೊತೆಗೆ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಪರಿಣಾಮವನ್ನು ಬೀರುತ್ತದೆ.