ಕಲಬುರಗಿ : ಜಿಲ್ಲೆಯ ಜೀವನದಿ ಭೀಮಾ ನದಿಗೆ ಮಹಾರಾಷ್ಟ್ರದ ಉಜನಿ ಜಲಾಯಶದಿಂದ ನೀರು ಹರಿವು ಬಿಡಲಾಗುತ್ತಿದ್ದು, ಇತ್ತ ಭೀಮಾ ನದಿಯು ಅಪಾಯಕಾರಿ ಮಟ್ಟದಲ್ಲಿ ಹರಿಯುತ್ತಿದೆ.
ಹೌದು, ಒಟ್ಟಾರೆ ಭೀಮಾ ನದಿಯಲ್ಲಿ ಒಳಹರಿವು 145,000 ಕ್ಯೂಸೆಕ್ಸ್ ಇದ್ದರೆ ಹೊರ ಹರಿವು ಸಹ 145,000 ಕ್ಯೂಸೆಕ್ಸ್ ಇದೆ. ಹೀಗಾಗಿ ಭೀಮಾ ಏತ ನೀರಾವರಿ ಜಲಾಶಯದ 29 ಗೇಟುಗಳ ಪೈಕಿ 22 ಗೇಟುಗಳ ಮೂಲಕ ನೀರು ಹರಿ ಬಿಡಲಾಗುತ್ತಿದೆ. ಹೀಗಾಗಿ ಶ್ರೀಕ್ಷೇತ್ರ ದೇವಲ್ ಗಾಣಗಾಪುರ- ಇಟಗಾ ನಡುವೆ ಸಂಪರ್ಕ ಕಡಿತವಾಗಿದೆ. ಅದಲ್ಲದೇ ಶ್ರೀಕ್ಷೇತ್ರ ಮಣ್ಣೂರು ಯಲ್ಲಮ್ಮ ದೇವಾಲಯ ಸಹ ಜಲಾವೃತಗೊಂಡಿದೆ.
ಕಲಬುರಗಿ ಜಿಲ್ಲೆಯಲ್ಲಿ ಆಗಸ್ಟ್ 30 ರಿಂದ ಸೆಪ್ಟೆಂಬರ್ 3 ರವರೆಗೆ ಭಾರಿ ಪ್ರಮಾಣದಲ್ಲಿ ಮಳೆಯಾಗಲಿದ್ದು, ಒಂದು ವೇಳೆ ಕಲಬುರಗಿ ಜಿಲ್ಲೆಯಲ್ಲೂ ಮಳೆಯಾಗಿದಲ್ಲಿ ಭೀಮಾ ಪ್ರವಾಹ ಮತ್ತಷ್ಟು ಅಪಾಯ ಮಟ್ಟದಲ್ಲಿ ಹರಿಯುವ ಆತಂಕ ಎದುರಾಗುವ ಸಾಧ್ಯತೆಗಳಿವೆ ಎಂದು ಹವಮಾನ ಇಲಾಖೆ ತಿಳಿಸಿದೆ.