ದೇಶ

ಪ್ರಯಾಗ್‌ರಾಜ್‌ನ ಮಹಾಕುಂಭದಲ್ಲಿ ಭೂತಾನ್‌ ದೊರೆ ಪುಣ್ಯಸ್ನಾನ

ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಜೊತೆಯಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ತಾಣಕ್ಕೆ ಆಗಮಿಸಿದ ಭೂತನ್ ದೊರೆ, ನದಿ ನೀರಿನಲ್ಲಿ ಮಿಂದೆದ್ದಿದ್ದಾರೆ..

ವಿಶ್ವದ ಅತೀದೊಡ್ಡ ಧಾರ್ಮಿಕ ಕಾರ್ಯಕ್ರಮ ಮಹಾಕುಂಭಕ್ಕೆ ಭೂತಾನ್‌ ದೊರೆ ಸಾಕ್ಷಿಯಾಗಿದ್ದಾರೆ.. ಪ್ರಯಾಗ್‌ರಾಜ್‌ನಲ್ಲಿ ನಡೆಯುತ್ತಿರುವ ಮಹಾಕುಂಭಕ್ಕೆ ಭೂತಾನ್ ದೊರೆ ಜಿಗ್ಮೆ ಖೇಸರ್ ನಮ್ಗೇಲ್ ವಾಂಗ್ ಚುಕ್ ಭೇಟಿ ನೀಡಿ ತ್ರಿವೇಣಿ ಸಂಗಮದಲ್ಲಿ ಪುಣ್ಯ ಸ್ನಾನ ಮಾಡಿದ್ದಾರೆ.. ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಜೊತೆಯಲ್ಲಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮ ತಾಣಕ್ಕೆ ಆಗಮಿಸಿದ ಭೂತನ್ ದೊರೆ, ನದಿ ನೀರಿನಲ್ಲಿ ಮಿಂದೆದ್ದಿದ್ದಾರೆ.. ಇಷ್ಟೇ ಅಲ್ಲದೇ  ಸಂಗಮ ಸ್ನಾನದ ನಂತರ ಅಕ್ಷಯ ವಟ ಮತ್ತು ಬಡೇ ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿದರು.. ಇಬ್ಬರೂ ನಾಯಕರು ಡಿಜಿಟಲ್ ಮಹಾಕುಂಭ ಅನುಭೂತಿ ಕೇಂದ್ರಕ್ಕೂ ಭೇಟಿ ನೀಡಿದ್ದಾರೆ..