ದೇಶ

ಗ್ರಾಹಕರಿಗೆ BSNLನಿಂದ ಬಿಗ್ ಆಫರ್, BSNL ನಿಂದ ಪೋರ್ಟ್​ ಆಗುತ್ತಿರುವವರು ತಿಳಿದುಕೊಳ್ಳಲೇ ಬೇಕಾದ ವಿಷಯ..!

BSNL ನೆಟ್‌ವರ್ಕ್ ವಿಸ್ತರಿಸುತ್ತಿದೆ. ಬೇರೆ ನೆಟ್‌ವರ್ಕ‌ಗಳಿಂದ ಬಿಎಸ್ಎನ್‌ಎಲ್‌ಗೆ ಪೋರ್ಟ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 4ಜಿ ಇಂಟರ್ನೆಟ್ ಸೇರಿದಂತೆ ಹಲವು ಸೌಲಭ್ಯ ನೀಡಿದೆ.

ನವದೆಹಲಿ: BSNL ನೆಟ್‌ವರ್ಕ್ ವಿಸ್ತರಿಸುತ್ತಿದೆ. ಬೇರೆ ನೆಟ್‌ವರ್ಕ‌ಗಳಿಂದ ಬಿಎಸ್ಎನ್‌ಎಲ್‌ಗೆ ಪೋರ್ಟ್ ಆಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. 4ಜಿ  ಇಂಟರ್ನೆಟ್ ಸೇರಿದಂತೆ ಹಲವು ಸೌಲಭ್ಯ ನೀಡಿದೆ. ಇದರ ಜೊತೆ ಅತೀ ಕಡಿಮೆ ಬೆಲೆಯಲ್ಲಿ ರೀಚಾರ್ಚ್ ಆಫರ್ ನೀಡುತ್ತಿದೆ. ಪ್ರಮುಖವಾಗಿ ಇತರ ನೆಟ್‌ವರ್ಕ್ ರೀಚಾರ್ಜ್ ಬೆಲೆ ದುಬಾರಿಯಾಗುತ್ತಿರುವ ಕಾರಣ ಗ್ರಾಹಕರು ಬಿಎಸ್ಎನ್‌ಎಲ್‌ನತ್ತ ಮುಖ ಮಾಡುತ್ತಿದ್ದಾರೆ. ಇದೀಗ ಬಿಎಸ್ಎನ್‌ಎಲ್ ಅತೀ ಕಡಿಮೆ ಬೆಲೆ ಅಂದರೆ ಕೇವಲ 187 ರೂಪಾಯಿಗೆ ಅದ್ಭುತ ಕೊಡುಗೆ ನೀಡಿದೆ.

ಬಿಎಸ್ಎನ್‌ಎಲ್‌ನಲ್ಲಿ 187 ರೂಪಾಯಿಗೆ ರೀಚಾರ್ಜ್ ಮಾಡಿದರೆ ಸಾಕು, ಪ್ರತಿ ದಿನ 1.5 ಜಿಬಿ ಡೇಟಾ, ಅನ್‌ಲಿಮಿಟೆಡ್ ಕಾಲ್, 28 ದಿನ ವ್ಯಾಲಿಟಿಡಿ ನೀಡುತ್ತಿದೆ. ಪ್ರತಿ ದಿನದ 1.5 ಜಿಬಿ ಡೇಟಾ ಮುಗಿದ ಬಳಿಕ ಇಂಟರ್ನೆಟ್ ಸ್ಪೀಡ್ 40Kbpsಗೆ ಇಳಿಕೆಯಾಗಲಿದೆ.  28 ದಿನ 1.5 ಜಿಬಿ ಡೇಟಾ ಹಾಗೂ ಉಚಿತ ಕಾಲ್ ಇತರ ನೆಟ್‌ವರ್ಕ್‌ಗಳಲ್ಲಿ 300ರೂಪಾಯಿ ಅಸುಪಾಸಿನಲ್ಲಿದೆ. ಸದ್ಯಕ್ಕೆ ಅತೀ ಕಡಿಮೆ ಬೆಲೆಯಲ್ಲಿ ಬಿಎಸ್ಎನ್‌ಎಲ್ ಈ ಆಫರ್ ನೀಡುತ್ತಿದೆ.