ಮೈಸೂರು - ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಪತ್ನಿ ವಿರುದ್ದ ಮುಡಾ ಹಗರಣ ಆರೋಪ ಸಂಬಂಧ ಇಂದು ಮುಡಾ ವರದಿ ಸಲ್ಲಿಕೆ ಸಾಧ್ಯತೆ ಇದೆ. ಇವತ್ತಿನ ಲೋಕಾಯುಕ್ತ ವರದಿಯಲ್ಲಿ ಬಹುತೇಕ ಸಿಎಂ ಸಿದ್ದರಾಮಯ್ಯ ಗೆ ಸಿಗಲಿದೆಯಾ ರಿಲೀಫ್ ಎಂಬ ಲೆಕ್ಕಚಾರವೂ ಇದೆ. ಇನ್ನೂ ಲೋಕಾಯುಕ್ತ ವರದಿಯಲ್ಲಿ ಸಿಎಂ ಸಿದ್ದರಾಮಯ್ಯ ಭವಿಷ್ಯ ಆಡಕವಾಗಿದೆ.
ಇನ್ನೂ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಇಂದು ಅಂತಿಮ ತನಿಖಾ ವರದಿ ಸಲ್ಲಿಕೆ ಸಾಧ್ಯತೆ ಆಗಿದೆ. ಹಾಗೇ ಇಂದು ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಇದೆ . ಮುಡಾ ಸೈಟ್ ಹಗರಣ ತನಿಖೆಗೆ ಕೋರಿ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿ ಸಲ್ಲಿಸಿದ್ದರು. ಸಿಎಂ ಸಿದ್ದರಾಮಯ್ಯ, ಸಿದ್ದರಾಮಯ್ಯ ಪತ್ನಿ ಪಾರ್ವತಿ ಬಿಎಂ, ಸಿಎಂ ಬಾಮೈದ ಮಲ್ಲಿಕಾರ್ಜುನ ಸ್ವಾಮಿ ಹಾಗೂ ದೇವರಾಜ್ ವಿರುದ್ಧದ ಅರ್ಜಿ ಸಲ್ಲಿಸಲಾಗಿದೆ. ಕಳೆದ ಸೆಪ್ಟೆಂಬರ್ ನಲ್ಲಿ ಲೋಕಾಯುಕ್ತ ತನಿಖೆಗೆ ಕೋರ್ಟ್ ಆದೇಶಿಸಿದೆ. ಇದೇ ವೇಳೆ ಮೂರು ತಿಂಗಳ ಅವಧಿಯೊಳಗೆ ವರದಿ ನೀಡುವಂತೆ ಆದೇಶಿಸಿತು. ಮೂಲಗಳ ಪ್ರಕಾರ ಬಹುತೇಕ ಸುಮಾರು ಮೂರು ಸಾವಿರ ಪುಟಗಳ ಫೈನಲ್ ರಿಪೋರ್ಟ್ ಸಲ್ಲಿಕೆಗೆ ಸಿದ್ದತೆಯೂ ಇದೆ.