ನವದೆಹಲಿ: ದೆಹಲಿ ವಿಧಾನಸಭಾ ಚುನಾವಣೆಗೆ ಮುನ್ನ ಆಮ್ ಆದ್ಮಿ ಪಕ್ಷ (ಎಎಪಿ) ದೊಡ್ಡ ಹಿನ್ನಡೆ ಅನುಭವಿಸಿದೆ. ಎಎಪಿ ಮುಖಂಡ ಮತ್ತು ಪಕ್ಷದ ಮಾಜಿ ಶಾಸಕ ಡಾ.ಸುಖ್ಬೀರ್ ಸಿಂಗ್ ದಲಾಲ್ ಅವರು ಭಾರತೀಯ ಜನತಾ ಪಕ್ಷ (ಬಿಜೆಪಿ) ಸೇರಿದರು. ಸುಖ್ಬೀರ್ ಸಿಂಗ್ 2015 ರಿಂದ 2020 ರವರೆಗೆ ಮುಂಡ್ಕಾ ವಿಧಾನಸಭಾ ಕ್ಷೇತ್ರದ ಎಎಪಿ ಶಾಸಕರಾಗಿದ್ದರು.
ಸುಖ್ಬೀರ್ ಸಿಂಗ್ ದಲಾಲ್ ಅವರಲ್ಲದೆ, ಸರ್ದಾರ್ ಬಲ್ಬೀರ್ ಸಿಂಗ್ ಕೂಡ ಬಿಜೆಪಿಗೆ ಸೇರಿದ್ದಾರೆ. ಬಲ್ಬೀರ್ ಸಿಂಗ್ 6 ಬಾರಿ ದೆಹಲಿ ಸಿಖ್ ಗುರುದ್ವಾರ ನಿರ್ವಹಣಾ ಸಮಿತಿಯ (ಡಿಎಸ್ಜಿಪಿಸಿ) ಚುನಾಯಿತ ಸದಸ್ಯರಾಗಿದ್ದಾರೆ. ಅವರು ೧೯೯೫ ರಿಂದ ಪೂರ್ವ ದೆಹಲಿಯ ವಿವೇಕ್ ವಿಹಾರ್ ನಿಂದ ಡಿಎಸ್ ಜಿಪಿಸಿ ಸದಸ್ಯರಾಗಿದ್ದಾರೆ.