ಕರ್ನಾಟಕ

ಬಿಗ್ ಬಾಸ್ ಖ್ಯಾತಿಯ ರಾಜೀವ ಹನು ಅಭಿನಯದ ಬೇಗೂರ್ ಕಾಲೋನಿ ಸಾಂಗ್ ಔಟ್

ಶ್ರೀಮಾ ಸಿನಿಮಾಸ್ ಲಾಂಛನದಲ್ಲಿ ಎಂ ಶ್ರೀನಿವಾಸ್ ಬಾಬು ನಿರ್ಮಿಸಿರುವ, ಫ್ಲೈಯಿಂಗ್ ಕಿಂಗ್ ಮಂಜು ನಿರ್ದೇಶನದ ಹಾಗೂ "ಬಿಗ್ ಬಾಸ್" ಖ್ಯಾತಿಯ ರಾಜೀವ್ ಹನು ನಾಯಕರಾಗಿ ನಟಿಸಿರುವ "ಬೇಗೂರು ಕಾಲೋನಿ" ಚಿತ್ರದ ಸಾಂಗ್ ರಿಲೀಸ್ ಆಗಿದೆ..

ಡಾ||ವಿ.ನಾಗೇಂದ್ರಪ್ರಸಾದ್ ಬರೆದಿರುವ "ಜೈ ಭೀಮ್" ಹಾಡು ಆನಂದ್ ಆಡಿಯೋ ಮೂಲಕ ಬಿಡುಗಡೆಯಾಗಿದೆ. ಅಭಿನಂದನ್ ಕಶ್ಯಪ್ ಸಂಗೀತ ನೀಡಿರುವ ಈ ಹಾಡನ್ನು ಹೆಸರಾಂತ ಗಾಯಕ ಶಂಕರ್ ಮಹಾದೇವನ್ ಹಾಡಿದ್ದಾರೆ.

"ಬೇಗೂರ್ ಕಾಲೋನಿ" ಒಂದು ಹೋರಾಟದ ಕಥೆ. ಕಾಲೋನಿಲ್ಲಿರುವ ಮಧ್ಯಮವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯುವುದು ಆಟದ ಮೈದಾನಕ್ಕಾಗಿ. ಮೈದಾನಗಳೆಲ್ಲಾ ಮನೆಗಳಾಗುತ್ತಿದೆ. ಮಕ್ಕಳಿಗೆ ಆಡಲು ಜಾಗವಿಲ್ಲದ ಹಾಗೆ ಆಗಿದೆ.‌ ಈ ಅಂಶವನ್ನು ಪ್ರಮುಖವಾಗಿಟ್ಟುಕೊಂಡು ಕಥೆ ಹೆಣೆಯಲಾಗಿದೆ. ಈ ಕಾಲೋನಿಯಲ್ಲಿ ಹಿಂದು, ಮುಸ್ಲಿಂ, ಕ್ರೈಸ್ತ ಹೀಗೆ ಎಲ್ಲಾ ಜನಾಂಗದವರು ವಾಸಿಸುತ್ತಿರುತ್ತಾರೆ. ಈ ಕಾಲೋನಿ ಸಾಮರಸ್ಯದ ಸಂಕೇತ ಎಂದರೆ ತಪ್ಪಾಗಲಾರದು.


ಇಂದು ಬಿಡುಗಡೆಯಾಗಿರುವ "ಜೈ ಭೀಮ್" ಹಾಡು ಬಹಳ ಚೆನ್ನಾಗಿದೆ ಎಂದು ಮಾತನಾಡಿದ ನಾಯಕ ರಾಜೀವ್  ಹನು, ನಿರ್ದೇಶಕರು ಹೇಳಿದ ಹಾಗೆ ಇದು ಹೋರಾಟದ ಕಥೆ. ಈ ಹೋರಾಟ ಬೇರೆ ಯಾವುದಕ್ಕೂ ಅಲ್ಲ. ಆಟದ ಮೈದಾನಕ್ಕಾಗಿ. ಮಕ್ಕಳಿಗೆ ಪಾಠದಷ್ಟೇ ಆಟ ಕೂಡ ಮುಖ್ಯ. ಆದರೆ ಮಕ್ಕಳು ಆಟವಾಡಲು ಈಗ ಮೈದಾನಗಳು ಹೆಚ್ಚು ಇಲ್ಲ. ಈ ಚಿತ್ರದಲ್ಲಿ ನನ್ನ ಪಾತ್ರದ ಹೆಸರು ರಾಘವ. ಚಿತ್ರತಂಡದ ಸಹಕಾರದಿಂದ ನಮ್ಮ ಚಿತ್ರ ಉತ್ತಮವಾಗಿ ಮೂಡಿಬಂದಿದೆ ಎಂದರು.ಇನ್ನು ಚಿತ್ರ ಇದೇ‌ ಜನವರಿ 31 ರಂದು ತೆರೆಗೆ ಬರಲಿದೆ