ಸ್ಪೆಷಲ್ ಸ್ಟೋರಿ

ಬಿಗ್​ಬಾಸ್​ ಜಗದೀಶ್​ ಬೈಕ್ ರೇಡ್​ - ಫುಲ್​ ರಾಂಗ್​ !!

ಬಿಗ್​ ಬಾಸ್ ಬಳಿಕ ಹೊಸ ದಾರಿಯಲ್ಲಿ ಜಗದೀಶ್​

ಬೆಂಗಳೂರು - ಬಿಗ್ ಬಾಸ್ ಸ್ಪರ್ಧಿಯಾಗಿದ್ದ ಲಾಯರ್ ಎಂದು ಹೇಳಿಕೊಳ್ಳುವ ಜಗದೀಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಬಿಗ್ ಬಾಸ್ನಿಂದ ಹೊರಬಂದು ಈಗ ಸಾಮಾಜಿಕ ಕಾರ್ಯಕ್ರಮಗಳಿಗೆ ಭಾಗವಹಿಸುವುದರಲ್ಲೇ ಬಿಸಿಯಾಗಿದ್ಧಾರೆ. ನಿತ್ಯ ಒಂದೊಂದು ಕಾರ್ಯಕ್ರಮ ಬರುತ್ತಲೇ ಇದೆ. ಜೊತೆಗೆ ಭಿನ್ನ - ವಿಭಿನ್ನ ಕೆಲಸಗಳಲ್ಲಿ ಸೋಷಿಯಲ್ ಮೀಡಿಯಾ ಮೂಲಕ ಜನರೊಂದಿಗೆ ಸಂಪರ್ಕ ಹೊಂದಲು ಪ್ರಯತ್ನ ಪಡುತ್ತಿದ್ದಾರೆ. 

ಸಮಯ ನ್ಯೂಸ್ ನೊಂದಿಗೆ ಜಗದೀಶ್ ಬೈಕ್ ರೋಡ್ ಹೋಗಿದ್ದಾರೆ. ಇದೇ ವೇಳೆ ರಸ್ತೆ ಗುಂಡಿಗಳ ನೋಡಿ ರಾಂಗ್ ಆಗಿದ್ದರು. ಬೇರೆ ದೇಶಗಳಲ್ಲಿ ಮಾದರಿ ರಸ್ತೆಗಳಿವೆ. ನಮ್ಮ ರಾಜಧಾನಿ ಬೆಂಗಳೂರಿನಲ್ಲಿ ಕಿತ್ತೊಗಿರುವ ಸ್ಥಿತಿಯಲ್ಲಿದೆ ರಸ್ತೆಗಳು. ಈ ಪರಿಸ್ಥಿತಿ ಬದಲಾಗಬೇಕಿದೆ. ಹಾಗೇ ನಾನು ಮುಂದಿನ ದಿನಗಳಲ್ಲಿ ಸಿಎಂ ಆಗುವೆ .ಆಗ ತಪ್ಪದೇ ರಸ್ತೆ ಗುಂಡಿ , ಕೆರೆ ಸಮಸ್ಯೆ , ಆಹಾರ ಕೊರತೆ ವಿಚಾರ ಎಲ್ಲವನ್ನ ಬಗೆಹರಿಸುವೆ ಎಂದು ಸದ್ಯ ಆಡಳಿತದಲ್ಲಿರುವ ನಾಯಕರ ವಿರುದ್ಧ ಅದ್ರಲೂ ಡಿಸಿಎಂ ಡಿ.ಕೆ.ಶಿವಕುಮಾರ್ ವಿರುದ್ಧ ಆಕ್ರೋಶ ಹೊರಹಾಕಿದ್ದರು.