ಹಾವೇರಿ : ಪಂಚಾಯಿತಿ ಕಚೇರಿಯ ಮುಂಭಾಗದಲ್ಲಿ ನಿಲ್ಲಿಸಿದ್ದ ಬೈಕ್‌ಗೆ ಬೈಕ್ ತಗುಲಿ ಬೆಂಕಿ ಹೊತ್ತಿ ಉರಿದ ಘಟನೆಯೊಂದು ಹಾವೇರಿ ಜಿಲ್ಲೆಯ ಹಿರೇಕೆರೂರುನಲ್ಲಿ ನಡೆದಿದೆ. ಪಟ್ಟಣದ ಎಂಜಿನಿಯರ್ ರಾಮಚಂದ್ರ ಬಿಜಾಪುರ ಅವರಿಗೆ ಸೇರಿದ ಬೈಕ್ ಇದಾಗಿದೆ.
ಹೌದು, ತಾಲ್ಲೂಕು ಕಚೇರಿಯಲ್ಲಿ ಅಂತರ್ಜಾಲದ ನೆಟ್ ವರ್ಕ್ ಸಮಸ್ಯೆ ಹಿನ್ನೆಲೆ ಅದನ್ನು ಸರಿಪಡಿಸಲೆಂಸು ರಾಮಚಂದ್ರ ಅವರು ಕಚೇರಿಗೆ ಬಂದಿದ್ದಾಗ ಈ ಅವಘಡ ಸಂಭವಿಸಿದೆ. ಕೆಲಸ ಮುಗಿಸಿ ರಾಮಚಂದ್ರ ಅವರು ಹೊರಗೆ ಬಂದು ಬೈಕ್ ಕೀ ಆನ್ ಮಾಡಿದ್ದರು. ಇದೇ ಸಂದರ್ಭದಲ್ಲಿಯೇ ಏಕಾಏಕಿ ಬೆಂಕಿ ಹೊತ್ತಿಕೊಂಡಿದೆ. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಬೆಂಕಿ ನಂದಿಸಿ ಅನಾಹುತ ತಪ್ಪಿಸಿದ್ದಾರೆ.