ಕರ್ನಾಟಕ

ಹಂಪ್ಸ್‌ ಎಗರಿಸಿ ಬಿದ್ದು ಬೈಕ್‌ ಸವಾರ ಸಾವು..!

ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಂಪ್ಸ್‌ ಎಗರಿಸಿ ಬಿದ್ದು ಸಾವನ್ನಪ್ಪಿರುವ ಘಟನೆ, ಮಂಡ್ಯದ ವಿಸಿ ಫಾರಂ ಗೇಟ್‌ ಬಳಿ ನಡೆದಿದೆ.

ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಹಂಪ್ಸ್‌ ಎಗರಿಸಿ ಬಿದ್ದು ಸಾವನ್ನಪ್ಪಿರುವ ಘಟನೆ, ಮಂಡ್ಯದ ವಿಸಿ ಫಾರಂ ಗೇಟ್‌ ಬಳಿ ನಡೆದಿದೆ. ಶುಕ್ರವಾರ ರಾತ್ರಿ ನಡೆದ ಅಪಘಾತದಲ್ಲಿ ಮೃತಪಟ್ಟ ಯುವಕನನ್ನು 24 ವರ್ಷದ ರೋಹಿತ್‌ ಎನ್ನಲಾಗಿದೆ. ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಯುವಕ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿ ಬರುತ್ತಿದೆ. ಅವೈಜ್ಞಾನಿಕ ಹಂಪ್‌ ನಿರ್ಮಾಣದಿಂದ ಈ ಘಟನೆ ಸಂಭವಿಸಿದೆ ಎನ್ನಲಾಗಿದೆ. ಮಂಡ್ಯದ ವಿಸಿ ಫಾರಂ ಗೇಟ್ ಬಳಿ ಅವೈಜ್ಞಾನಿಕ ಹಂಪ್ಸ್ ನಿರ್ಮಾಣವಾಗಿದ್ದು, ವೈಟ್ ಟ್ಯಾಪಿಂಗ್ ಮಾಡದೆ ಎತ್ತರದ ಹಂಪ್ಸ್ ನಿರ್ಮಿಸಿ ನಿರ್ಲಕ್ಷ್ಯ ತೋರಿದ್ದಾರೆ. ಕಳೆದೊಂದು ವಾರದ ಹಿಂದೆ ಕಟ್ಟಲಾಗಿರುವ ಹಂಪ್‌ನಿಂದ, ಸರಣಿ ಅಪಘಾತಗಳು ಸಂಭವಿಸಿವೆ. ರೋಹಿತ್‌ ಸಾವಿಗೂ ಮುನ್ನ ಬಿದ್ದು ಹಲವರು ಗಾಯಗೊಂಡಿದ್ದಾರೆ ಎನ್ನಲಾಗುತ್ತಿದೆ. ಸಾವು, ನೋವು ಸಂಭವಿಸಿದ್ರು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಕ್ರಮವಹಿಸಿಲ್ಲ ಎಂಬ ಆರೋಪ ಕೇಳಿಬಂದಿದೆ.