ಬೆಳಗಾವಿ : ಜಿಲ್ಲೆಯಲ್ಲಿ ಧಾರಾಕಾರವಾಗಿ ಮಳೆ ಸುರಿಯುತ್ತಿದ್ದು, ಸೇತುವೆಗಳು ಜಲಾವೃತಗೊಂಡಿವೆ. ಅಪಾಯವನ್ನ ಲೆಕ್ಕಿಸಿದೇ ಇಬ್ಬರು ಬೈಕ್ ಸವಾರರು ಸೇತುವೆ ದಾಟುತ್ತಿದ್ದ ವೇಳೆ ಇಬ್ಬರನ್ನು ರಕ್ಷಣೆ ಮಾಡಲಾಗಿದೆ. ಹಳ್ಳದಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದ ಸಹೋದರ, ಸಹೋದಯರನ್ನು ಸ್ಥಳೀಯರು ರಕ್ಷಣೆ ಮಾಡಿದ್ದಾರೆ.

ಈ ಘಟನೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಚಿಕ್ಕಬುದನೂರ ಗ್ರಾಮಕ್ಕೆ ಹೊರವಲಯದಲ್ಲಿ ನಡೆದಿದೆ. ನಿರಂತರ ಮಳೆಗೆ ಹಿರೇಬುದನೂರ ಗ್ರಾಮದಿಂದ ಚಿಕ್ಕಬುದನೂರ ಹೋಗುವ ಸೇತುವೆ ಸಂಪೂರ್ಣ ಜಲಾವೃತವಾಗಿತ್ತು,ಇದೇ ವೇಳೆ ಬೈಕ್ ಸವಾರ ಜಲಾವೃತಗೊಂಡ ಸೇತುವೆ ದಾಟಲು ಮುಂದಾಗಿದ್ದಾರೆ. ಈ ವೇಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗುತ್ತಿದ್ದಾಗ ಸ್ಥಳೀಯರು ರಕ್ಷಣೆ ಮಾಡಿದ್ದಾರೆ.
ಬೈಕ್ ಸವಾರ ಮತ್ತು ಆತನ ಸಹೋದರಿಯನ್ನ ಸ್ಥಳೀಯರು ರಕ್ಷಿಸಿದ್ದು, ಸೇತುವೆ ಮಧ್ಯದಲ್ಲಿಯೇ ಸಿಲುಕಿಕೊಂಡ ಬೈಕನಿಂದ ಬಡಜೀವಗಳು ಬದುಕಿಕೊಂಡಿವೆ. ಚಿಕ್ಕಬುದನೂರ ಗ್ರಾಮದ ಬೀರಬಲ್ಲ ಡೊಳ್ಳಿ, ನಿಂಗವ್ವ ದೇಗಾನಟ್ಟಿ ಪ್ರಾಣಾಪಾಯದಿಂದ ಪಾರಾದವರು ಎಂದು ತಿಳಿದುಬಂದಿಂದೆ. ಈ ಘಟನೆ ಸವದತ್ತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.