ಬೆಳಗಾವಿ : ಆಮ್ಲಜನಕದ ಖಜಾನೆ, ಜೀವವೈವಿಧ್ಯ ತಾಣವಾಗಿರೋ ಕಪ್ಪತಗುಡ್ಡದ ಉಳಿವಿಗಾಗಿ ಬೆಳಗಾವಿಯಲ್ಲಿ ಪರಿಸರವಾದಿಗಳು ಹೋರಾಟ ನಡೆಸಿದರು. ಬೆಳಗಾವಿ ಪ್ರಾದೇಶಿಕ ಕಚೇರಿ ಮುಂಭಾಗದಲ್ಲಿ ನಂದಿವೇರಿ ಶಿವಕುಮಾರ್ ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು.
ಕಪ್ಪತಗುಡ್ಡ ಉತ್ತರ ಕರ್ನಾಟಕದ ನಾಲ್ಕೈದು ಜಿಲ್ಲೆಗಳ ಪರಿಸರ ಸಮತೋಲನ ಕಾಯುತ್ತೆ. ಕಪ್ಪತಗುಡ್ಡದಲ್ಲಿ ಅಪಾರ ವನಸ್ಪತಿ ಖನಿಜ ಸಂಪನ್ಮೂಲವನ್ನ ಒಳಗೊಂಡಿದೆ. ಆದ್ರೆ ರಾಜ್ಯ ಸರ್ಕಾರ ಗಣಿಗಾರಿಕೆಗೆ ಈಗಾಗಲೇ ಅವಕಾಶ ನೀಡಿದೆ. ಈ ಆದೇಶವನ್ನ ಹಿಂಪಡೆಯಬೇಕೆಂದು ಆಗ್ರಹಿಸಿ, ಕಪ್ಪತ್ತಗುಡ್ಡ ಉಳಿಸಿ ಎಂದು ಘೋಷಣೆ ಕೂಗಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಬೆಳಗಾವಿ ಪ್ರಾದೇಶಿಕ ಆಯುಕ್ತರು ಕಪ್ಪತಗುಡ್ಡದಲ್ಲಿ ಗಣಿಗಾರಿಕೆ ಮಾಡೊದನ್ನ ಕೈಬಿಡಬೇಕು. ಇಲ್ಲವಾದರೆ ರಾಜ್ಯದಾದ್ಯಂತ ಉಗ್ರ ಹೋರಾಟದ ಎಚ್ಚರಿಕೆ ನೀಡಿದರು.
ಬೆಳಗಾವಿ ಪ್ರಾದೇಶಿಕ ಆಯುಕ್ತರ ನೇತೃತ್ವದಲ್ಲಿ ಸಭೆ ನಡೆಸಿ ನಿರ್ಣಯ ಕೈಗೊಳ್ಳುವಂತೆ ಸರ್ಕಾರಕ್ಕೆ ಸಲಹೆಯನ್ನ ನೀಡಿದ್ರು. ಇನ್ನು ಪ್ರತಿಭಟನೆಯಲ್ಲಿ ರೈತ ಮುಖಂಡರು, ವಿವಿಧ ಸಂಘಟನೆಗಳ ಮುಖಂಡರು, ಪರಿಸರವಾದಿಗಳಿಗೆ ಸಾಥ್ ನೀಡಿದ್ರು.