ಬೆಂಗಳೂರು: ಕರ್ನಾಟಕದ ಪ್ರತಿ ಜಿಲ್ಲೆಯಲ್ಲಿ ಒಂದೊಂದು ಶಾಲೆಯಲ್ಲಿ ಪ್ರಾಯೋಗಿಕವಾಗಿ ಬಯೋಮೆಟ್ರಿಕ್ ಅಳವಡಿಸಿ, ಹಾಜರಾತಿಯನ್ನ ಪಡೆಯಲಾಗಿತ್ತು. ಈ ಸಂದರ್ಭದಲ್ಲಿ ಯಾವುದೇ ತಾಂತ್ರಿಕ ದೋಷ ಕಂಡು ಬರದ ಕಾರಣ, ರಾಜ್ಯದ ಎಲ್ಲ ಸರ್ಕಾರಿ ಶಾಲೆಗಳಲ್ಲು ಬಯೊಮೆಟ್ರಿಕ್ ಅಳವಡಿಸಿ ಹಾಜರಾತಿಯನ್ನ ಕಡ್ಡಾಯಗೊಳಿಸುವ ಕುರಿತು ಶಿಕ್ಷಣ ಇಲಾಖೆ ಯೋಜನಾ ವರದಿಯನ್ನ ಸಿದ್ಧಪಡಿಸಿದೆ.
ಇಷ್ಟು ದಿನ ಖಾಸಗಿ ಸಂಸ್ಥೆ, ಸರ್ಕಾರಿ ಕಛೇರಿಗಳಲ್ಲಿ ನೌಕಕರ ಹಾಜರಾತಿಗೆ ಬಳಸುತಿದ್ದ ಬಯೊಮೆಟ್ರಿಕ್ ಈಗ ಶಾಲೆಗಳಲ್ಲು ಅಳವಡಿಕೆ ಮಾಡುತ್ತಿರುವುದರಿಂದ ಹಾಜರಾತಿಯನ್ನ ಕಡ್ಡಾಯಗೊಳಿಸುವುದಕ್ಕೆ ಸಹಾಯವಾಗುತ್ತದೆ