ಬೆಳಗಾವಿ : ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು ಬೆಳಗಾವಿಯ ಕನ್ನಡ ಸಾಹಿತ್ಯ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೀಸಲಾತಿ ರಾಜ್ಯದಲ್ಲಿ 7 ಹಂತದ ಹೋರಾಟ ಮಾಡಿದ್ದೆವೆ. ಒಂದು ವರ್ಷದಿಂದ ಸರ್ಕಾರ ನಮ್ಮ ಕೂಗು ಕೇಳ್ತಿಲ್ಲ. ನ್ಯಾಯಾಂಗದ ವಕೀಲರ ಮೂಲಕ ಒತ್ತಡ ಹಾಕಿದ್ವಿ. ವಕೀಲರ ಹೋರಾಟಕ್ಕೆ ಸಿಎಂ ಸಿದ್ದರಾಮಯ್ಯ ಸ್ಪಂಧಿಸಿದರು. ಅಕ್ಟೋಬರ್ 15 ನೇ ತಾರೀಕೂ ನಾನು ಸಭೆ ಮಾಡ್ತಿನಿ ಎಂದು ವಿನಂತಿ ಮಾಡಿದರು. ನನ್ನ ಮೊಬೈಲ್ ಗೆ ಫೋನ್ ಮಾಡಿ ಮನವಿ ಮಾಡಿದರು ಎಂದು ಹೇಳಿದ್ಧಾರೆ.

ಈ ಬಗ್ಗೆ ಬೆಳಗಾವಿಯಲ್ಲಿ ಸುದ್ದಿಗೋಷ್ಠಿ ಮಾಡಿದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರು, ಜಿಲ್ಲಾಧಿಕಾರಿಗಳು ಹಾಗೂ ವಿನಯ್ ಕುಲಕರ್ಣಿಯವರೂ ಸಹ ಮನವಿ ಮಾಡಿದರು. ಎಲ್ಲರೂ ಮನವಿ ಮಾಡಿದ ನಂತರ ಮಾತು ತಪ್ಪಲ್ಲ ಎಂದು ನಾವು ತಿಳಿದಿದ್ದೆವೆ. ಇವತ್ತು ರಾತ್ರಿ ಬೆಂಗಳೂರಿಗೆ ಹೊರಡಲು ಎಲ್ಲರೂ ಸಜ್ಜಾಗಿದ್ದಾರೆ. ನಿನ್ನೆಯಷ್ಟೆ ಜಿಲ್ಲಾಧಿಕಾರಿ ಕಚೇರಿಯವರು ಸಿಎಂ ಆಫೀಸಿಗೆ ಕರೆ ಮಾಡಿ ಕೇಳಿದ್ದಾರೆ ಆದರೆ
15 ನೇ ತಾರೀಕೂ ಸಿಎಂ ದೆಹಲಿಗೆ ಹೋಗಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ. ಅಕ್ಟೋಬರ್ 18 ನೇ ತಾರೀಕೂ ಪಂಚಮಸಾಲಿ ಸಮುದಾಯದ ವಕೀಲರು ಬೆಂಗಳೂರಿಗೆ ಬನ್ನಿ. 18 ಕ್ಕೆ ಬೆಂಗಳೂರಿಗೆ ಬರಲು ವಕೀಲರಿಗೆ ಸ್ವಾಮೀಜಿ ಆಹ್ವಾನ ನೀಡಿದ್ದಾರೆ. ನೀವು ಯಾವಾಗ ನಮ್ಮನ್ನ ಭೇಟಿ ಆಗ್ತಿರೋ ಆಗಿ ನಾವಂತೂ ಬೆಂಗಳೂರಿಗೆ ಬರ್ತಿವಿ ಎಂದರು.
ಸಿಎಂ 15 ನೇ ತಾರೀಕೂ ಎಂದು ಈವರೆಗೆ ದಿನಾಂಕ ನಿಗಧಿ ಮಾಡಿಲ್ಲ. ಹೀಗಾಗಿ ನಾವೇ 18 ನೇ ತಾರಿಕೂ ಬೆಂಗಳೂರಿಗೆ ಬರ್ತಿವಿ. ಅವತ್ತು ಸಭೆಗೆ ಸಮಯ ನಿಗಧಿ ಮಾಡದಿದ್ದರೆ ವಿಧಾನಸೌಧಕ್ಕೆ ಹೋಗ್ತಿವಿ. ಅಲ್ಲಿ ಅಸಮಾಧಾನ ಹೊರ ಹಾಕಿ ಪ್ರತಿಭಟನೆ ಮಾಡ್ತಿವಿ. ಪಂಚಮಸಾಲಿ ಶಾಸಕರಿಗೆ ಸಮಯ ನಿಗಧಿ ಮಾಡಲು ಆಗ್ತಿಲ್ವಾ ಎಂದು ಪ್ರಶ್ನೆ ಮಾಡಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ವಿನಯ್ ಕುಲಕರ್ಣಿ ಉಸ್ತುವಾರಿ ಸಚಿವರನ್ನು ನೋಡಿ ನಮ್ಮ ಶಾಸಕರು ಕಲಿಯಲಿ. ಸರ್ಕಾರ ಬರೋಕೆ ಇವರು ಆರಿಸಿ ಬರೋಕೆ ನಮ್ಮ ಹೋರಾಟ ಕಾರಣ.
ಕಾಂಗ್ರೇಸ್ ಸರ್ಕಾರ ಬಂದ ತಕ್ಷಣ ಪಂಚಮಸಾಲಿ ಶಾಸಕರು ಸಚಿವರು ಕಾಣ್ತಿಲ್ಲ. ಅದು ನನಗೂ ಗೊತ್ತಾಗುತ್ತಿಲ್ಲ. ನಮ್ಮ ಹೋರಾಟ ಯಾವುದೇ ಸರ್ಕಾರದ ಪರವಾಗಿ ಅಲ್ಲ. ಲಕ್ಷ್ಮೀ ಹೆಬ್ಬಾಳಕರ್ ನಾನು ಸ್ವಾಮೀಜಿಯನ್ನ ಸಿಎಂಗೆ ಭೇಟಿ ಮಾಡ್ಸಿದಿನಿ ಅಂದಿದ್ದರು ಎಲ್ಲಿ ಭೇಟಿ ಮಾಡ್ಸಿದ್ದಾರೆ ಎಂದು ಮರು ಪ್ರಶ್ನೆ ಮಾಡಿದ್ದಾರೆ. ಸ್ಪೀಕರ್ ಗೆ ಮನವಿ ಮಾಡಿದ್ದೆವೆ ಅಂತ ಶಾಸಕರು ಹೇಳಿದ್ರು. ಸ್ಪೀಕರ್ ಗೆ ಕೇಳಿದ್ರೆ ನನ್ನಹತ್ರ ಯಾರೂ ಬಂದಿಲ್ಲ ಅಂತ ಸ್ಪೀಕರ್ ಹೇಳಿದ್ರು. ಇದರಲ್ಲಿ ಯಾರನ್ನ ನಂಬೋದು. ಆಗಿನ ಸರ್ಕಾರಕ್ಕೆ ನಮ್ಮ ಹೋರಾಟದ ಭಯ ಇತ್ತು. ಈಗಿನವರು ಮಾತನಾಡಿದರೆ ಎನಾದರೂ ಆದೀತು ಎಂಬ ಅಂಜಿಕೆಯಲ್ಲಿದ್ದಾರೆ ಎಂದರು.
ವಿಜಯಾನಂದ ಕಾಶಪ್ಪನವರ ಹೋರಾಟದಲ್ಲಿ ಕಾಣದ ವಿಚಾರ. ಅವರು ಯಾಕೆ ಬರ್ತಿಲ್ಲ ನಮಗೂ ಗೊತ್ತಿಲ್ಲ ಅವರು ನಿರ್ಲಕ್ಷ ಯಾಕೆ ಮಾಡ್ತಿದ್ದಾರೆ ನಮಗೂ ಗೊತ್ತಿಲ್ಲ. ಅವರು ಮಾಜಿ ಇದ್ದಾಗ ಬಂದು ಹೋರಾಟ ಮಾಡಿದ್ರು ಎಂದು ತೃಪ್ತಿ ಪಡಬೇಕಾಗಿದೆ ಎಂದು ಹೇಳಿದ್ದಾರೆ.