ದೇಶ

ಯಮುನಾ ನದಿಗೆ ಬಿಜೆಪಿ ಸರ್ಕಾರ ವಿಷ ಬೆರೆಸುತ್ತಿದೆ - ಅರವಿಂದ್ ಕೇಜ್ರಿವಾಲ್

ನೀರಿನ ವಿಷಯದ ಬಗ್ಗೆ ಅತಿಶಿ ಇಂದು ಮತ್ತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ದೆಹಲಿಗೆ ಬರುವ ನೀರಿನಲ್ಲಿ ಅಮೋನಿಯಾ ಎಂಬ ವಿಷವಿದೆ ಎಂದು ದೆಹಲಿ ಜಲ ಮಂಡಳಿಯ ಸಿಇಒ ನಿನ್ನೆ ದೃಢಪಡಿಸಿದ್ದಾರೆ..

ದೆಹಲಿಗೆ ಹರಿದು ಬರುವ ಯಮುನಾ ನದಿ ನೀರಿಗೆ ಹರಿಯಾಣದ ಆಡಳಿತರೂಢ ಬಿಜೆಪಿ ಸರ್ಕಾರ ವಿಷ ಬೆರೆಸುತ್ತಿದೆ ಎಂದು ಎಎಪಿ ಸಂಚಾಲಕ, ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಗಂಭೀರ ಆರೋಪ ಮಾಡಿದ್ದಾರೆ.. ಎಎಪಿ ಸರ್ಕಾರಕ್ಕೆ ಕಳಂಕ ತರಲು ಸಂಚು ನಡೆಯುತ್ತಿದೆ.. ದಿಲ್ಲಿಯ ಜನರು ನೀರಿನ ಹಾಹಾಕಾರದಿಂದ ಒದ್ದಾಡುವಂತೆ ಮಾಡೋದು ಬಿಜೆಪಿಯ ಪ್ಲಾನ್‌ ಎಂದು ಆರೋಪಿಸಿದ್ದಾರೆ.. ಹರಿಯಾಣ ಸರ್ಕಾರ ಕೈಗಾರಿಕೆಯ ತ್ಯಾಜ್ಯವನ್ನ ಯಮುನಾ ನದಿಗೆ ಬಿಟ್ಟು, ನೀರನ್ನು ಕಲುಷಿತಗೊಳಿಸುತ್ತಿದೆ ಹೊಸ ಬಾಂಬ್‌ ಸಿಡಿಸಿದ್ದಾರೆ.. ನೀರಿನ ವಿಷಯದ ಬಗ್ಗೆ ಅತಿಶಿ ಇಂದು ಮತ್ತೆ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ದೆಹಲಿಗೆ ಬರುವ ನೀರಿನಲ್ಲಿ ಅಮೋನಿಯಾ ಎಂಬ ವಿಷವಿದೆ ಎಂದು ದೆಹಲಿ ಜಲ ಮಂಡಳಿಯ ಸಿಇಒ ನಿನ್ನೆ ದೃಢಪಡಿಸಿದ್ದಾರೆ.. ಇಂದು ಸಂಜೆ 4 ಗಂಟೆಗೆ ಭೇಟಿಯಾಗಲು ಭಗವಂತ್ ಮಾನ್ ಮತ್ತು ಅತಿಶಿ ಅವರಿಗೆ ಚುನಾವಣಾ ಆಯೋಗ ಸಮಯ ನೀಡಿದೆ.. ಇಬ್ಬರೂ ಹೋಗುತ್ತಾರೆ.. ಹರಿಯಾಣ ಸಿಎಂ ನೀರಿನ ವಿಷಯದಲ್ಲಿ ರಾಜಕೀಯ ಮಾಡಬೇಡಬಾರದು.. ನೀವು ಪ್ರಕರಣ ದಾಖಲಿಸುತ್ತೀರಿ ಎಂದು ನಮ್ಮನ್ನು ಹೆದರಿಸಲು ಪ್ರಯತ್ನಿಸಬೇಡಿ.. ದೆಹಲಿಯ ಜನರನ್ನು ಸಾಯಲು ನಾನು ಬಿಡುವುದಿಲ್ಲ.. ಕೊಳಕು ರಾಜಕೀಯ ಮಾಡಬೇಡಿ ಎಂದು ನಿಮ್ಮ ಪಕ್ಷಕ್ಕೆ ಹೇಳಿ ಎಂದು ಗುಡುಗಿದ್ದಾರೆ.. ದೆಹಲಿ ಚುನಾವಣೆ ಹೊತ್ತಿನಲ್ಲೇ ಅರವಿಂದ ಕೇಜ್ರಿವಾಲ್‌ ಗಂಭೀರ ಆರೋಪ ಮಾಡಿರೋದು ಮುಂದಿನ ದಿನಗಳಲ್ಲಿ ಯಾವ ರೀತಿ ತಿರುವು ಪಡೆಯಲಿದೆ ಅನ್ನೋದನ್ನ ಕಾದುನೋಡಬೇಕಿದೆ..