ಧಾರವಾಡ: ರಾಜ್ಯ ಬಿಜೆಪಿ ಪಕ್ಷದಲ್ಲಿ ನಾಯಕರ ನಡುವೆ ಬಣಬಡಿದಾಟ ಜೋರಾಗಿಯೇ ನಡೀತಾಯಿದೆ. ಬಿಜೆಪಿ ಅಲ್ಲಿ ಎರಡು ಪಂಗಡಗಳಾಗಿದ್ದು, ರಾಜ್ಯದಲ್ಲಿ ಎರಡು ಟೀಂಗಳಿಂದ ಪ್ರತ್ಯೇಕ ಚಟುವಟಿಕೆಗಳು ನಡೆಯುತ್ತಿದೆ. ಇದರ ನಡುವೆ ಬಿಜೆಪಿ ಪಕ್ಷದಲ್ಲಿ ಅಸಮಾಧಾನ ಇರೋದು ನಿಜ ಎಂದು ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ್ ಒಪ್ಪಿಕೊಂಡಿದ್ದಾರೆ.
ಧಾರವಾಡದಲ್ಲಿ ಮಾತನಾಡಿದ ಅರವಿಂದ ಬೆಲ್ಲದ್, ನಮ್ಮ ಪಕ್ಷದಲ್ಲಿ ಅಸಮಾಧಾನ ಇರೋದು ಎಲ್ಲರಿಗೂ ಕಂಡು ಬಂದ ವಿಷಯ. ಅದರಲ್ಲಿ ಮುಚ್ಚುವಂತ ವಿಷಯ ಏನೂ ಇಲ್ಲಾ. ಅದನ್ನು ಒಂದು ಕಡೆ ಕೂತು ಬಗೆಹರಿಸಿಕೊಳ್ಳೋ ಅವಶ್ಯಕತೆ ಇದೆ. ಕಳೆದ ಕೆಲ ದಿನಗಳಿಂದ ನಮ್ಮ ಹೈಕಮಾಂಡ್ ಒಂದಿಲ್ಲ ಒಂದು ಚುನಾವಣೆಯಲ್ಲಿ ಬಿಝಿ ಇದೆ. ಇಷ್ಟು ದಿನ ಮಹಾರಾಷ್ಟ್ರ ಹಾಗೂ ಛತ್ತಿಸಘಡ ಚುನಾವಣೆಯಲ್ಲಿ ಇದ್ರು. ಈಗ ಮತ್ತೇ ದೆಹಲಿ ಹಾಗೂ ಬಿಹಾರ್ ಚುನಾವಣೆ ಬಂದಿದೆ. ನಮ್ಮ ರಾಜ್ಯಕ್ಕೆ ಅವರಿಗೆ ಸಮಯ ಕೊಡಲು ಆಗಿಲ್ಲ. ಅವರೇ ಬಂದು ಸಮಸ್ಯೆ ಇತ್ಯರ್ಥ ಮಾಡುತ್ತಾರೆ ಎಂಬ ನಂಬಿಕೆ ಇದೆ. ಇದು ಪಕ್ಷದ ಒಳಗೆ ಚೌಕಟ್ಟಿನಲ್ಲಿ ಮಾತನಾಡುವ ವಿಚಾರ. ಟಿವಿ ಮುಂದೆ ಮಾತಾಡೋದಲ್ಲ, ಪಕ್ಷದಲ್ಲೆ ಬಗೆಹರಿಸಿಕೊಳ್ಳುತ್ತೇವೆ ಎಂದು ಬೆಲ್ಲದ ಅವರು ಹೇಳಿದ್ದಾರೆ.